ಬಿಜೆಪಿ ನವೆಂಬರ್ 8ಕ್ಕಿಂತ ಮೊದಲಿನ ಬ್ಯಾಂಕ್ ವ್ಯವಹಾರ ಬಹಿರಂಗಪಡಿಸಲಿ: ಕೇಜ್ರಿವಾಲ್
ಹೊಸದಿಲ್ಲಿ,ನ. 30: ಬಿಜೆಪಿ ಎಂಪಿ,ಎಂಎಲ್‌ಎಗಳ ಆರುತಿಂಗಳಿಗಿಂತ ಮೊದಲಿನ ಬ್ಯಾಂಕ್ ವ್ಯವಹಾರಗಳನ್ನು ಹಾಜರುಪಡಿಸಲು ಪ್ರಧಾನಿ ಹೇಳಲಿ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆಂದು ವರದಿಯಾಗಿದೆ. ಜೊತೆಗೆ ಗೆಳೆಯರಾದ ಅಂಬಾನಿ, ಅದಾನಿ,ಪೆಟಿಎಂ, ಬಿಗ್‌ಬಝಾರ್ ಇವರ ಬ್ಯಾಂಕ್ ವಿವರಗಳನ್ನು ಕೂಡಾ ಮೋದಿ ಕೇಳಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೋಟು ಅಮಾನ್ಯ ತೀರ್ಮಾನ ಬಿಜೆಪಿ, ಎಂಪಿ, ಎಂಎಲ್‌ಎಗಳಿಗೆ ಮೊದಲೇ ಗೊತ್ತಿತ್ತು ಎಂಬ ಆರೋಪವನ್ನು ನಿರಾಕರಿಸಲು ಅನುವಾಗುವಂತೆ ನವೆಂಬರ್ 8ರಿಂದ ಡಿಸೆಂಬರ್ 31ರವರೆಗಿನ ಇವರೆಲ್ಲರ ಬ್ಯಾಂಕ್ ವ್ಯವಹಾರಗಳನ್ನು ಪಾರ್ಟಿ ಅಧ್ಯಕ್ಷ ಅಮಿತ್ ಶಾಗೆ ಜನವರಿ ಒಂದರ ಮೊದಲು ತಿಳಿಸಬೇಕೆಂದು ಮೋದಿ ನೀಡಿದ ಆದೇಶವನ್ನು ಕೇಜ್ರಿವಾಲ್ ಈ ರೀತಿ ಟೀಕಿಸಿದ್ದಾರೆ.
ನೋಟು ನಿಷೇಧ ಘೋಷಿಸಿದ ನವೆಂಬರ್ ಎಂಟಕ್ಕಿಂತ ಮೊದಲುವ್ಯಾಪಕ ಭ್ರಷ್ಟಾಚಾರ ನಡೆದಿದೆ. ಬಿಹಾರದಲ್ಲಿ ಮತ್ತು ಇತರ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಜಮೀನು ಖರೀದಿಸಿ ಬಿಜೆಪಿ ಅಕ್ರಮ ಸೊತ್ತು ಬಿಳಿಮಾಡಿಕೊಂಡಿದೆ. ತನಗೆ ಬೇಕಾದವರೆಲ್ಲರು ನವೆಂಬರ್ ಎಂಟಕ್ಕೆ ಮೊದಲು ತಮ್ಮ ಸೊತ್ತುಗಳನ್ನು ಸುರಕ್ಷಿತ ಮೇಲೆ ಮೋದಿ ನೋಟು ಅಮಾನ್ಯಗೊಳಿಸಿಘೋಷಣೆ ಹೊರಡಿಸಿ ಜನಸಾಮಾನ್ಯರನ್ನು ವಂಚಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಬ್ಯಾಂಕ್‌ಗಳ ಡಿಪಾಸಿಟ್‌ಗಳ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ ಜುಲೈಯಿಂದ ಸೆಪ್ಟಂಬರ್‌ವರೆಗೆ ಬ್ಯಾಂಕ್‌ಗಳಿಗೆ ಭಾರೀ ಮೊತ್ತದ ಹೂಡಿಕೆಗಳು ಬಂದಿವೆ.
ಯಾರು ಇಷ್ಟು ಹೂಡಿಕೆ ನಡೆಸಿದ್ದೆಂದು ಪರಿಶೀಲಿಸಬೇಕಾಗಿದೆ. ಅಕ್ರಮ ಸಂಪತ್ತು ಇರುವುದು, ಅಂಬಾನಿ, ಅದಾನಿ, ಸುಭಾಶ್ಚಂದ್ರ, ಬಾದಲ್‌ರಂತಹವರ ಕೈಯಲ್ಲೇ ಅಥವಾ ಸೈಕಲ್ ರಿಕ್ಷಾದವರ, ರೈತರ, ದಿನಕೂಲಿಗಳ ಕೈಯಲ್ಲೇ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆಂದು ವರದಿ ತಿಳಿಸಿದೆ.