×
Ad

ವಿರಾಟ್ ವ್ಯಕ್ತಿತ್ವಕ್ಕೆ ಇಂಗ್ಲೆಂಡ್ ಅಭಿಮಾನಿಗಳು ಬೋಲ್ಡ್ !

Update: 2016-11-30 15:54 IST

ಮೊಹಾಲಿ,ನ.30 : ವಿರಾಟ್ ಕೊಹ್ಲಿಯೆಂದರೆ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚುಮೆಚ್ಚು ಎಂಬುದು ಎಲ್ಲರಿಗೂ ತಿಳಿದ ವಿಚಾರ. ವಿರಾಟ್ ಅವರನ್ನು ಅಂಗಣದಲ್ಲಿ ಕಂಡ ಕೂಡಲೇ ಅವರ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರುವುದಿಲ್ಲ.ಆದರೆ ವಿರೋಧಿ ತಂಡಗಳು ಅವರ ಬಗ್ಗೆ ಏನೆನ್ನುತ್ತವೆ ? ಹೆಚ್ಚಿನ ವಿರೋಧಿ ಕ್ರಿಕೆಟ್ ತಂಡಗಳು ಅವರನ್ನು ಹೇಗೆ ಔಟ್ ಮಾಡುವುದು ಎಂಬ ಬಗ್ಗೆಯೇ ಚರ್ಚಿಸಬಹುದು.

ತಮ್ಮ ತಂಡದ ಪಾಲಿಗೆ ಕ್ರಿಕೆಟ್ ಅಂಗಣದಲ್ಲಿ ಕಂಟಕವಾಗಿರುವ ವಿರಾಟ್ ಬಗ್ಗೆ ಇಂಗ್ಲೆಂಡಿನ ಕ್ರಿಕೆಟ್ ಅಭಿಮಾನಿಗಳು ಏನು ಅಭಿಪ್ರಾಯ ಹೊಂದಿರಬಹುದೆಂದು ಯೋಚಿಸಿದ್ದೀರಾ ?ಕೊಹ್ಲಿಯವರ ಆಟದ ಶೈಲಿ ಅದ್ಭುತ ಹಾಗೂ ಅವರು ತಂಡಕ್ಕೆ ಉತ್ತಮ ನಾಯಕತ್ವ ನೀಡುವವರಾಗಿದ್ದಾರೆ.

ಇಂಗ್ಲೆಂಡ್ ತಂಡದ ಸ್ಟೋಕ್ಸ್ ಅವರು ತಮ್ಮ ಕೆಟ್ಟ ನಡವಳಿಕೆಗೆ ಹೆಸರಾದವರು. ಇತ್ತೀಚೆಗೆ ತಾವು ಮೊದಲ ಇನ್ನಿಂಗ್ಸ್ ನಲ್ಲಿ ಔಟಾದಾಗ ಕೆಟ್ಟ ನಡವಳಿಕೆ ತೋರಿದ್ದ ಸ್ಟೋಕ್ಸ್ ತಮ್ಮ ಸೈಲಂಟ್ ಟ್ರೀಟ್ ಮೆಂಟ್ ಎರಡನೇ ದಿನವೂ ಕೊಹ್ಲಿ ಔಟಾದಾಗ ಮುಂದುವರಿಸಿದ್ದರು.

ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಕೊಹ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ಸ್ಟೋಕ್ಸ್ ಔಟಾದಾಗ ನೀಡಿದ್ದರು.

ಪ್ರತಿ ಬಾರಿ ಸ್ಟೋಕ್ಸ್ ಅವರು ಬೌಂಡರಿ ಬಳಿ ಫೀಲ್ಡಿಂಗ್ ಮಾಡುವಾಗ ಅಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಂದ ಏನಾದರೂ ಅಣಕ ಕೇಳಲೇ ಬೇಕಾಗಿತ್ತು. ಆದರೆ ಇಂಗ್ಲೆಂಡ್ ತಂಡ ಏನೂ ಮಾಡದೇ ಇರುವ ಸ್ಥಿತಿಯಲ್ಲಿ ಕೇವಲ ತಲೆಯಲ್ಲಾಡಿಸಿ, ನಗಬಹುದಾಗಿತ್ತೇ ವಿನಹ ಬೇರೆಯೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.

ಕೊಹ್ಲಿಯಂತಹ ಆಟಗಾರ ಭಾರತದ ತಂಡದಲ್ಲಿರುವಾಗ ಇಂಗ್ಲೆಂಡ್ ಕ್ರಿಕೆಟಿಗರು ತಮ್ಮದೇ ಹುಡುಗರನ್ನು ಭಾರತದ ಕ್ರಿಕೆಟ್ ಅಭಿಮಾನಿಗಳೆದುರು ಸಮರ್ಥಿಸುವ ಸ್ಥಿತಿಯಲ್ಲೂ ಇಲ್ಲ.

ಯುವ ಆಟಗಾರ ಹಸೀಬ್ ಹಮೀದ್ ಅವರ ಅದ್ಭುತ ಬ್ಯಾಟಿಂಗ್ ನೋಡಿ ಅವರನ್ನು ವಿರಾಟ್ ಹುರಿದುಂಬಿಸಿದ ರೀತಿ ಕೂಡ ಬಹಳಷ್ಟು ಬ್ರಿಟಿಷರಿಗೆ ಸಂತಸ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News