ಮಂಗಳೂರು ವಿವಿ: ದೂರ ಶಿಕ್ಷಣ ಸ್ನಾತಕ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿ ಅವಧಿ ವಿಸ್ತರಣೆ

Update: 2016-11-30 10:37 GMT

ಮಂಗಳೂರು, ನ.30: ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಕಾರ್ಯಕ್ರಮದಡಿ 2016-17ನೆ ಸಾಲಿನ ಸ್ನಾತಕ ಪದವಿ (ಬಿಎ, ಬಿ.ಕಾಂ, ಬಿಬಿಎಂ) ಮತ್ತು ಸ್ನಾತಕೋತ್ತರ ಪದವಿ ಎಂ.ಎ, ಎಂ.ಕಾಂ, ಕೋರ್ಸ್‌ಗಳ ಪ್ರವೇಶಾತಿ ಆರಂಭಗೊಂಡಿದ್ದು, ದಂಡರಹಿತವಾಗಿ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನವನ್ನು ನವೆಂಬರ್ 30 ಆಗಿತ್ತು. ಆದರೆ ಇದೀ ಅದನ್ನು ಡಿಸೆಂಬರ್ 15ರವರೆಗೆ ವಿಸ್ತರಿಸಲಾಗಿದೆ. ಪಿಯುಸಿ/ಮೂರು ವರ್ಷದ ಡಿಪ್ಲೋಮಾ ಉತ್ತೀರ್ಣರಾದ ಯಾವುದೇ ವಯೋಮಿತಿಯ ಅಭ್ಯರ್ಥಿಗಳು ಪದವಿ ಕೋರ್ಸ್‌ಗೆ ಹಾಗೂ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಕೋರ್ಸ್‌ಗೂ ಪ್ರವೇಶ ಪಡೆಯಬಹುದಾಗಿದೆ ಎಂದು ವಿಶ್ವ ವಿದ್ಯಾನಿಲಯದ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News