×
Ad

ಡಿಕೆಎಸ್‌ಸಿ 20ನೆ ವಾರ್ಷಿಕೋತ್ಸವ: ಡಿ.2ರಂದು ಉದ್ಘಾಟನೆ

Update: 2016-11-30 20:41 IST

ಮಂಗಳೂರು, ನ.30: ಮೂಳೂರಿನ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿಕೆಎಸ್‌ಸಿ) ಇದರ 20ನೆ ವಾರ್ಷಿಕೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಮೂಳೂರಿನ ಮರ್ಕಝ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿರುವ ಮಹಾಸಮ್ಮೇಳನದ ಉದ್ಘಾಟನೆಯು ಡಿಸೆಂಬರ್ 2ರಂದು ನಡೆಯಲಿದೆ.

ಡಿಕೆಎಸ್‌ಸಿ ಮಂಗಳೂರು ಇದರ ಅಧ್ಯಕ್ಷ ಸಯ್ಯಿದ್ ಕೆ. ಎಸ್. ಆಟಕೋಯ ತಂಙಳ್ ಕುಂಬೋಲ್ ದುಆ ನೆರವೇರಿಸಲಿದ್ದಾರೆ. ಸಮಸ್ತ ಕೇರಳ ಮುಶಾವರದ ಪ್ರಧಾನ ಕಾರ್ಯದರ್ಶಿ ಹಾಗೂ ಕಾಸರಗೋಡು ಖಾಝಿ ಶೈಖುನಾ ಅಲಿ ಕುಟ್ಟಿ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸೈಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್‌ಮದ್ ಮುಸ್ಲಿಯಾರ್, ಸಮಸ್ತ ಕೇರಳ ಮುಶಾವರದ ಸದಸ್ಯಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಮಿತ್ತಬೈಲ್, ಮೂಡಿಗೆರೆ ಸಂಯುಕ್ತ ಖಾಝಿ ಎಮ್.ಎ. ಖಾಸಿಂ ಮುಸ್ಲಿಯಾರ್ ಕುಂಬ್ಲೆ, ಫಲಾಹ್ ರಿಸರ್ಚ್ ಸೆಂಟರ್ ದೆಹಲಿ ಇದರ ಅಧ್ಯಕ್ಷ ಡಾ. ಫಝಲುಲ್ಲಾ ಚಿಸ್ತಿ, ರಾಜ್ಯಾದ್ಯಕ್ಷರು, ಎಸ್ಕೆಎಸ್ಸೆಸೆಫ್ ಮೌಲಾನಾ ಅನೀಸ್ ಕೌಸರಿ, ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯಕುಮಾರ್ ಸೊರಕೆ, ಮಾಜಿ ಉನ್ನತ ಶಿಕ್ಷಣ ಸಚಿವ ಬಿ. ಎ ಮೊದಿನ್, ಯೇನೆಪೋಯ ಗ್ರೂಪ್‌ನ ಅಧ್ಯಕ್ಷ ಯೇನೆಪೋಯ ಮುಹಮ್ಮದ್ ಕುಂಞಿ, ಮುಸ್ಲಿಮ್ ಸೆಂಟ್ರಲ್ ಕಮಿಟಿ, ದ.ಕ ಮತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಅಲ್ಪಸಂಖ್ಯಾತ ಅಬಿವೃದ್ಧಿ ನಿಗಮದ ಅಧ್ಯಕ್ಷ ಎಂ. ಎ ಗೂರ್, ಗೇರು ಅಬಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್ ಖಾದರ್ ಬಂಟ್ವಾಳ, ಅಲ್ ಮುಝೈನ್ ಕಂಪೆನಿ ಕೆಎಸ್‌ಎ ಇದರ ಅಧ್ಯಕ್ಷ ಝಕರಿಯಾ ಜೋಕಟ್ಟೆ, ದ. ಕ. ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ದಾರುನ್ನೂರ್, ಕಾಶಿಪಟ್ಣ ಇದರ ಪ್ರ. ಕಾರ್ಯದರ್ಶಿ ಹನೀಫ್ ಹಾಜಿ, ಉಡುಪಿ ಕಾಂಗ್ರೆಸ್‌ ಅಲ್ಪಸಂಖ್ಯಾತ ಅಭಿವೃದ್ಧಿ ಘಟಕದ ಅಧ್ಯಕ್ಷ ಮೊದಿನಬ್ಬ ಪಲಿಮಾರ್, ತೋಡಾರಿನ ಶಂಶುಲ್ ಉಲಮಾ ಅರೇಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಪೈಝಿ ತೋಡಾರ್, ಜಂ-ಇಯ್ಯತುಲ್ ಮುಅಲ್ಲಿಮೀನ್ ದ.ಕ ಜಿಲ್ಲಾಧ್ಯಕ್ಷ ಮೌಲಾನಾ ಉಮರ್ ದಾರಿಮಿ ಪಟ್ಟೋರಿ, ಗುರುಪುರ ರೇಂಜ್ ಮದರಸ ಸಮಿತಿ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ ಸೇರಿದಂತೆ ಉಲಮಾ, ಉಮರಾಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News