ಎನ್‌ಜಿಒಗಳು ಅನುದಾನ ಪಡೆಯಲು ನೀತಿ ಆಯೋಗದಲ್ಲಿ ನೋಂದಣಿ ಅಗತ್ಯ

Update: 2016-11-30 16:28 GMT

ಹೊಸದಿಲ್ಲಿ,ನ.30: ಸಚಿವಾಲಯಗಳು ಅಥವಾ ಕೇಂದ್ರ ಸರಕಾರದ ಇಲಾಖೆಗಳಿಂದ ಅನುದಾನವನ್ನು ಪಡೆಯಲು ಎನ್‌ಜಿಒಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ನೀತಿ ಆಯೋಗದಲ್ಲಿ ನೊಂದಾಯಿಸಿಕೊಳ್ಳುವುದು ಈಗ ಕಡ್ಡಾಯವಾಗಿದೆ ಎಂದು ಸಹಾಯಕ ಯೋಜನಾ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

ನ.24ಕ್ಕೆ ಇದ್ದಂತೆ ಒಟ್ಟು 81,353 ಎನ್‌ಜಿಒಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ನೀತಿ ಆಯೋಗದ ಪೋರ್ಟಲ್ ಎನ್‌ಜಿಒ ದರ್ಪಣ್‌ನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News