ಕುಂದಾಪುರ: ನೋಟು ರದ್ಧತಿ ವಿರೋಧಿಸಿ ಸಿಪಿಎಂ ಪ್ರತಿಭಟನೆ

Update: 2016-11-30 17:30 GMT

ಕುಂದಾಪುರ, ನ.30: ಉತ್ತರ ಪ್ರದೇಶ, ಪಂಜಾಬ್ ಚುನಾವಣೆಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ರಾಜಕೀಯವಾಗಿ ಪ್ರಚಾರ ಗಿಟ್ಟಿಸಲು ಬಿಜೆಪಿ ನೋಟುಗಳನ್ನು ರದ್ದುಗೊಳಿಸಿದೆ. ಇದರಿಂದ ಯಾವುದೇ ಕಪ್ಪುಹಣ ನಿಯಂತ್ರಿಸಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರ ಸರಕಾರ ನಾಟಕವಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಟೀಕಿಸಿದ್ದಾರೆ.

ಕೇಂದ್ರ ಸರಕಾರದ ನೋಟು ರದ್ಧತಿಯಿಂದ ಜನಸಾಮಾನ್ಯರಿಗೆ ಆಗಿರುವ ತೊಂದರೆಯನ್ನು ವಿರೋಧಿಸಿ ಸಿಪಿಐಎಂ ಕುಂದಾಪುರ ಹಾಗೂ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಬುಧವಾರ ಕುಂದಾಪುರ ತಾಪಂ ಕಚೇರಿ ಮುಂದೆ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿ ದ್ದರು.
ಬಡ ಜನರನ್ನು ಸಾಯಿಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಕೇಂದ್ರ ಸರಕಾರ ಹವಣಿಸುತ್ತಿದೆ. ಪ್ರಧಾನಿಯವರ ಏಕಪಕ್ಷೀಯ ನಿರ್ಣಯದಿಂದಾಗಿ ದೇಶದಾ ದ್ಯಂತ 75 ಜನ ಸಾವನ್ನಪ್ಪಿದ್ದರೆ ಇದು ಬಿಜೆಪಿಯವರಿಗೆ ಸಂಭ್ರಮದ ದಿನವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನೋಟು ನಿಷೇಧದಿಂದ ಭಯೋತ್ಪಾದನೆ ತಡೆಯಲು ಸಾಧ್ಯವಿಲ್ಲ. ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಮಾತ್ರ ಭಯೋತ್ಪಾದನೆ ತಡೆಯಲು ಸಾಧ್ಯ. ಶೇ.60ರಷ್ಟು ಬಡವರು, ಅನಕ್ಷರಸ್ಥರಿರುವ ಭಾರತದಲ್ಲಿ ಕ್ಯಾಶ್ ಲೆಸ್ ವ್ಯವಹಾರ ಎಂಬುದು ಅಸಾಧ್ಯ. ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಸರಿಯಾದ ಪೂರ್ವತಯಾರಿ ಇಲ್ಲದೇ ಮಾಡಿರುವ ನೋಟು ರದ್ಧತಿಯಿಂದ ಬಡವರು ಬೀದಿಗೆ ಬಂದಿದ್ದಾರೆ ಎಂದು ಅವರು ಆರೋಪಿಸಿದರು.

ಧರಣಿಯಲ್ಲಿ ಸಿಪಿಎಂ ಮುಖಂಡರಾದ ವೆಂಕಟೇಶ್ ಕೋಣಿ, ಮಹಾಬಲ ವಡೇರಹೋಬಳಿ, ರಾಜೇಶ್ ವಡೇರಹೋಬಳಿ, ಶೀಲಾವತಿ ಪಡುಕೋಣೆ, ನಾಗರತ್ನಾ ನಾಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News