ಇಸ್ಲಾಂ ಸ್ವೀಕರಿಸಿದ ಪೈಝಲ್ ತಾಯಿ ?

Update: 2016-12-01 08:40 GMT

ಮಲಪ್ಪುರಂ, ಡಿ.1:  ಇಸ್ಲಾಂ  ಸ್ವೀಕರಿಸಿದ ಎಂಬ ಕಾರಣಕ್ಕೆ ಇತ್ತೀಚೆಗೆ ಕೊಲೆಗೀಡಾದ ಫೈಸಲ್ ನ ತಾಯಿ ಮೀನಾಕ್ಷಿ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ. ಅವರ ಹೆಸರು ಜಮೀಲ ಎಂದು ಬದಲಾಗಿದೆ ಎಂದು ಮಳಯಾಳಂನ ಹಲವು ವೆಬ್ ಸೈಟ್ ಗಳು ವರದಿ ಮಾಡಿದೆ.


ನನ್ನಲ್ಲಿ ಕೇಳಿಯೇ ಫೈಸಲ್ ಇಸ್ಲಾಂ ಧರ್ಮ ಸ್ವೀಕರಿಸಿದ್ದಾನೆ, ಅಲ್ಲದೆ ನನ್ನ ಸಹೋದರ ಒಂದು ವರ್ಷ ಹಿಂದೆಯೇ ಇಸ್ಲಾಂ ಧರ್ಮ ಸ್ವೀಕರಿಸಿದ್ದರು ಎಂದು ಅವರು ಹೇಳಿದ್ದಾರೆ.


ಪೈಸಲ್ ತನ್ನ ಕುಟುಂಬದವರನ್ನು ಇಸ್ಲಾಂ ಧರ್ಮಕ್ಕೆ ಆಹ್ವಾನಿಸುತ್ತಿದ್ದ ಎಂಬ ಕಾರಣಕ್ಕೆ ಪೈಸಲ್ ನ ಸಹೋದರಿಯ ಗಂಡ ವಿನೋದ್ ಹಾಗೂ ಇತರರು ಸೇರಿ ಆತನನ್ನು ಕೊಲೆಗೈದಿದ್ದನು ಎಂದು ಆರೋಪಿಸಲಾಗಿದೆ. ಅಲ್ಲದೆ ಪೈಸಲ್ಗೆ ವಿನೋದ್ ಪದೇ ಪದೇ ಬೆದರಿಕೆ ಒಡ್ಡುತ್ತಿದ್ದನು ಎಂದು ಮೀನಾಕ್ಷಿ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News