ಜಾತ್ಯತೀತ ಪ್ರಜಾಪ್ರಭುತ್ವ ದೇಶದ ಅಡಿಗಲ್ಲು: ಎ ಕೆ ಎಮ್ ಅಶ್ರಫ್

Update: 2016-12-01 18:07 GMT

  ಮಂಜೇಶ್ವರ, ಡಿ.1 : ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅಸ್ತಿತ್ವ ಕಂಡುಕೊಂಡಿರುವ ಹಲವಾರು ದೇಶಗಳಿದ್ದರೂ ಹಲವು ಜಾತಿ ಧರ್ಮ, ಹತ್ತಾರು ಭಾಷೆ ಸಂಸ್ಕೃತಿಗಳನ್ನು ಹೊಂದಿ ವೈವಿಧ್ಯತೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅತ್ಯಂತ ಯಶಸ್ವಿಯಾಗಿಮುನ್ನೆಡಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ ಕೆ ಎಮ್ ಅಶ್ರಫ್ ಹೇಳಿದರು.

   ರಾಜ್ಯ ಸಂಸದೀಯ ಇಲಾಖೆ ವತಿಯಿಂದ ಶೇಣಿ ಶ್ರೀ ಶಾರದಾಂಬ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಜಾತ್ಯತೀತ ಪ್ರಜಾಪ್ರಭುತ್ವ ವಿಷಯದಲ್ಲಿ ನಡೆದ ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಮಾಜಿ ಉನ್ನತ ಶಿಕ್ಷಣ ಕೌನ್ಸಿಲ್ ಎಕ್ಸಿಕ್ಯುಟಿವ್ ಸದಸ್ಯ ಡಾ. ಸಿ. ಬಾಲನ್ ಮಾತನಾಡಿ ಜಾತ್ಯತೀತ ಪ್ರಜಾಪ್ರಭುತ್ವದಷ್ಟು ಪಾರದರ್ಶಕವಾದ ವ್ಯವಸ್ಥೆ ಮತ್ತೊಂದಿಲ್ಲ. ಜಾತ್ಯತೀತತೆ ಎಂದರೆ ಅಧರ್ಮವಲ್ಲ ; ತತ್ವ ಸಿದ್ಧಾಂತಗಳ ವಿರೋಧಿಯಲ್ಲ ; ಬದಲಾಗಿ ನೈತಿಕ ಮೌಲ್ಯಕ್ಕೆ ಬೆಲೆ ಕಲ್ಪಿಸಿ , ಲೌಕಿಕವಾಗಿ ಎಲ್ಲಾ ಧರ್ಮಗಳ,ಸಂಸ್ಕೃತಿಗಳ ಸಮಾನತೆ ಮತ್ತು ಸಮನ್ವಯ ಸಾಧಿಸುವುದು ಎಂದು ಹೇಳಿದರು.

   ಶಾಲಾ ವ್ಯವಸ್ಥಾಪಕರಾದ ಜೆ ಎಸ್ ಸೋಮಶೇಖರ ಅಧ್ಯಕ್ಷತೆ ವಹಿಸಿದರು.

ಪಂಚಾಯತ್ ಸದಸ್ಯೆ ಪುಷ್ಪಾ ಎಮ್, ಪ್ರಭಾರ ಪ್ರಾಂಶುಪಾಲರಾದ ಗಣಪತಿ ರಮಣ ಪಿ,ಯು ಪಿ ಶಾಲೆ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಜೆ ಎಸ್, ಯು ಪಿ ಶಾಲೆಯ ವ್ಯವಸ್ಥಾಪಕಿ ಶಾರದ ವೈ,ನಿವೃತ ಪ್ರಾಂಶುಪಾಲ ರವೀಂದ್ರನಾಥ ನಾಯಕ್,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಪೆರ್ದನೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News