×
Ad

ಟ್ರಂಪ್ ಭೇಟಿ ಬಳಿಕ ಅಟಾರ್ನಿಯಾಗಿ ಪ್ರೀತ್ ಭರಾರ ಮುಂದುವರಿಕೆ

Update: 2016-12-01 23:58 IST

ವಾಶಿಂಗ್ಟನ್, ಡಿ. 1: ಭಾರತ ಮೂಲಕ ಪ್ರೀತ್ ಭರಾರ ಮ್ಯಾನ್‌ಹಟನ್‌ನಲ್ಲಿ ಅಮೆರಿಕದ ಅಟಾರ್ನಿಯಾಗಿ ಮುಂದಿನ ವರ್ಷವೂ ಮುಂದುವರಿಯುತ್ತಾರೆ.
 ಈ ವಿಷಯವನ್ನು ಬುಧವಾರ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾದ ಬಳಿಕ ಭರಾರ ತಿಳಿಸಿದರು. ಡೆಮಾಕ್ರಟಿಕ್ ಪಕ್ಷದವರಾದ ಭರಾರ ಅವರನ್ನು ಅಧ್ಯಕ್ಷ ಬರಾಕ್ ಒಬಾಮ 2009ರಲ್ಲಿ ಈ ಹುದ್ದೆಗೆ ನೇಮಿಸಿದ್ದರು. ಇನ್‌ಸೈಡರ್ ಟ್ರೇಡಿಂಗ್‌ನಿಂದ ಹಿಡಿದು ರಾಜಕೀಯ ಭ್ರಷ್ಟಾಚಾರದವರೆಗಿನ ಹಲವು ಮಹತ್ವದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿರುವ ಹೆಗ್ಗಳಿಕೆ ಅವರಿಗಿದೆ. ಸಾಮಾನ್ಯವಾಗಿ ನೂತನ ಅಧ್ಯಕ್ಷರು ಬೇರೆ ಪಕ್ಷದವರಾದರೆ ಅಮೆರಿಕದ ಅಟಾರ್ನಿಗಳು ರಾಜೀನಾಮೆ ಪತ್ರಗಳನ್ನು ಸಲ್ಲಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News