ಕ್ವೀನ್ ಆಗಲಿದ್ದಾಳೆ ತಮನ್ನಾ

Update: 2016-12-02 14:26 GMT

ಈ ವರ್ಷ ಬ್ಯಾಕ್ ಟು ಬ್ಯಾಕ್ ಮೂರು ಭರ್ಜರಿ ಹಿಟ್ ಚಿತ್ರಗಳನ್ನು ನೀಡುವ ಮೂಲಕ ತಮನ್ನಾ ಹ್ಯಾಟ್ರಿಕ್ ಸಾಧಿಸಿದ್ದಾಳೆ. ಆಕೆ ಅಭಿನಯಿಸಿದ ತಮಿಳು ಚಿತ್ರಗಳಾದ 'ತೋಳಾ', 'ಧರ್ಮದೊರೈ' ಹಾಗೂ 'ದೇವಿ' ಈ ಮೂರು ಚಿತ್ರಗಳೂ ಬಾಕ್ಸ್‌ಆಫೀಸಿನಲ್ಲಿ ಜಯಭೇರಿ ಬಾರಿಸಿವೆ. 'ಧರ್ಮದೊರೈ' ಚಿತ್ರದಲ್ಲಿ ಗ್ಲಾಮರ್‌ರಹಿತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಪ್ರೇಕ್ಷಕರು ತನ್ನ ಅಭಿನಯಕ್ಕೆ ಫುಲ್‌ಮಾರ್ಕ್ಸ್ ನೀಡಿರುವುದು ಆಕೆಗೆ ಖುಷಿ ತಂದಿದೆ. ಇದರೊಂದಿಗೆ ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ತಮನ್ನಾ ಅಭಿನಯದ ಚಿತ್ರಗಳ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಇದೀಗ ತಮನ್ನಾ ಚಿತ್ರಪ್ರೇಮಿಗಳಿಗಾಗಿ ಇನ್ನೊಂದು ಸಿಹಿಸುದ್ದಿ ನೀಡಿದ್ದಾಳೆ. ಬಾಲಿವುಡ್‌ನಲ್ಲಿ ಅದ್ಭುತ ಯಶಸ್ಸು ಕಂಡ 'ಕ್ವೀನ್' ಚಿತ್ರದ ತಮಿಳು ರಿಮೇಕ್‌ನಲ್ಲಿ ಆಕೆ ನಟಿಸಿದ್ದಾಳೆ.

ನಾಯಕಿ ಪ್ರಧಾನ ಕಥಾವಸ್ತುವಿರುವ ಈ ಚಿತ್ರಕ್ಕೆ ತಾನು ಆಯ್ಕೆಯಾಗಿರುವುದರಿಂದ ರೋಮಾಂಚನಗೊಂಡಿದ್ದೇನೆಂದು ತಮನ್ನಾ ಸಂತಸ ಹಂಚಿಕೊಂಡಿದ್ದಾಳೆ.

ರಿಮೇಕ್ ಚಿತ್ರವಾದರೂ ತಮಿಳಿನ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗುವುದೆಂದೂ ಆಕೆ ಹೇಳಿಕೊಂಡಿದ್ದಾರೆ. ಬಾಲಿವುಡ್‌ನ 'ಕ್ವೀನ್' ಚಿತ್ರವು ನಾಯಕಿ ನಟಿ ಕಂಗನಾರ ಜನಪ್ರಿಯತೆಯನ್ನು ಉತ್ತುಂಗಕ್ಕೇರಿಸಿತ್ತು. ಇದೀಗ ತಮಿಳು ಕ್ವೀನ್ ಮೂಲಕ ತಮನ್ನಾ ಕಾಲಿವುಡ್‌ನಲ್ಲಿ ನಂ.1 ಪಟ್ಟಕ್ಕೆ ಏರಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News