ಕಾಬಿಲ್ ನಲ್ಲಿ ಹೃತಿಕ್ ಅಂಧ

Update: 2016-12-02 15:48 GMT

ರೋಮ್ಯಾಂಟಿಕ್ ಹಾಗೂ ಆ್ಯಕ್ಷನ್ ಪಾತ್ರಗಳೆರಡರಲ್ಲೂ ಸೈ ಎನಿಸಿಕೊಳ್ಳುವ ನಟ ಹೃತಿಕ್ ರೋಷನ್ ಈಗ ಇನ್ನೊಂದು ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ. ಮುಂದಿನ ವರ್ಷದ ಜನವರಿಯಲ್ಲಿ ರಿಲೀಸ್ ಆಗಲಿರುವ ‘ಕಾಬಿಲ್’ ಚಿತ್ರದಲ್ಲಿ ಆತ ಕುರುಡನಾಗಿ ಅಭಿನಯಿಸಿದ್ದಾರೆ. ಬಾಲಿವುಡ್‌ನ ಉದಯೋನ್ಮುಖ ಪ್ರತಿಭೆ ಯಾಮಿ ಗೌತಮ್ ಚಿತ್ರದ ನಾಯಕಿ. ಬಿಟೌನ್‌ನಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ ಯಾಮಿಗೂ ಕೂಡಾ ‘ಕಾಬಿಲ್’ನಲ್ಲಿ ಕುರುಡಿಯ ಪಾತ್ರವಂತೆ.

ಸಂಜಯ್‌ಗುಪ್ತಾ ನಿರ್ದೇಶನದ ಈ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಅದರಲ್ಲಿ ಹೃತಿಕ್ ರಫ್ ಆ್ಯಂಡ್ ಟಫ್‌ಆಗಿ ಕಾಣಿಸಿಕೊಂಡಿದ್ದಾರೆ.

ಕಿರುತೆರೆಯಜನಪ್ರಿಯ ಕಲಾವಿದರು ಹಾಗೂ ಒಡಹುಟ್ಟಿದ ಸಹೋದರರಾದ ರೋನಿತ್ ರಾಯ್ ಹಾಗೂ ರೋಹಿತ್ ರಾಯ್, ‘ಕಾಬಿಲ್’ನಲ್ಲಿ ವಿಲನ್‌ಗಳಾಗಿ ನಟಿಸಿದ್ದು, ಇವರಿಬ್ಬರು ಚಿತ್ರದ ಇನ್ನೊಂದು ಆಕರ್ಷಣೆಯಾಗಲಿದ್ದಾರೆ.

ಐಶ್ವರ್ಯಾ ರೈ ನಾಯಕಿಯಾಗಿ ನಟಿಸಿದ್ದ ‘ಜಸ್ಬಾ’ ಬಳಿಕ ಸಂಜಯ್ ಗುಪ್ತಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹೃತಿಕ್ ತಂದೆ ರಾಕೇಶ್ ರೋಷನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷದ ಜನವರಿ 26ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ. ಇದೇ ದಿನದಂದು ಶಾರುಕ್ ಅಭಿನಯದ ಇನ್ನೊಂದು ಬಹುನಿರೀಕ್ಷಿತ ಚಿತ್ರ ‘ರಾಯಿಸ್’ ಬಿಡುಗಡೆಯಾಗಲಿದೆ. ಈ ಎರಡು ಬಿಗ್‌ಬಜೆಟ್ ಚಿತ್ರಗಳ ಬಾಕ್ಸ್ ಆಫೀಸ್ ಕದನ ಬಾಲಿವುಡ್‌ನಲ್ಲಿ ಈಗ ಭಾರೀ ಚರ್ಚೆಯ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News