ಸೌದಿ ಶೂರಾ, ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ದೊರೆಯ ಆದೇಶ

Update: 2016-12-03 04:24 GMT

ದುಬೈ, ಡಿ.3: ಸೌದಿ ಅರೇಬಿಯಾದ ದೊರೆ ಸಲ್ಮನ್ ಅಲ್ ಸೌದ್ ಅವರು ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದ್ದಾರೆ. ಸಾಮ್ರಾಜ್ಯದ ಶೂರಾ ಮಂಡಳಿಯ ಪುನರ್ ರಚನೆ ಇದರಲ್ಲಿ ಮಹತ್ವದ್ದು. ಸಾಮ್ರಾಜ್ಯದ ಅತ್ಯುನ್ನತ ಧಾರ್ಮಿಕ ಸಂಸ್ಥೆಯಾಗಿರುವ ಇದು ಹಿರಿಯ ಚಿಂತಕರ ಮಂಡಳಿಯಾಗಿದೆ.

ಶೂರಾದ ಪ್ರಧಾನ ಕಾರ್ಯದರ್ಶಿಯಾಗಿ, ಮುಹಮ್ಮದ್ ಬಿನ್ ಅಬ್ದುಲ್ಲಾ ಅಲ್ ಒಮರ್ ಅವರನ್ನು ಶುಕ್ರವಾರ ಅಧಿಕಾರದಿಂದ ಮುಕ್ತಗೊಳಿಸಲಾಗಿದ್ದು, ಅಬ್ದುಲ್ಲಾ ಅಲ್ ಅಶೀಕ್ ಈ ಸಲಹಾ ಮಂಡಳಿಯ ಮುಂದಿನ ಮುಖ್ಯಸ್ಥರಾಗಿರುತ್ತಾರೆ.

ಇತರ ದೊರೆಯ ಆದೇಶಗಳನ್ನು ಕೂಡಾ ಅದೇ ದಿನ ಪ್ರಕಟಿಸಲಾಗಿದೆ. ಅಲಿ ಬಿನ್ ನಸರ್ ಅಲ್ ಅಫೀಸ್ ಅವರನ್ನು ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವರಾಗಿ ನಿಯುಕ್ತಿಗೊಳಿಸಲಾಗಿದ.ಎ ಇದುವರೆಗೆ ಮುಫ್ರಜ್ ಅಲ್ ಹಕಬಾನಿ ಈ ಹುದ್ದೆಯಲ್ಲಿದ್ದರು. ಸೌದಿ ಕಸ್ಟಮ್ಸ್ ನಿರ್ದೇಶಕ ಸಲೇಹ್ ಬಿನ್ ಮನಿ ಅಲ್ ಖೇಲ್ವಿ ಅವರನ್ನೂ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News