ಸತತ 6ನೆ ಬಾರಿ ವರ್ಷದ ಅಥ್ಲೀಟ್ ಪ್ರಶಸ್ತಿ ಗೆದ್ದ ಬೋಲ್ಟ್

Update: 2016-12-03 05:25 GMT

ಮೊನಾಕೊ, ಡಿ.3:  ಓಟದ ರಾಜ ಜಮೈಕಾದ ಉಸೇನ್ ಬೋಟ್ಟ್ ಆರನೆ ಬಾರಿ ಐಎಎಎಫ್ ವರ್ಷದ ಪುರುಷರ ಅಥ್ಲೀಟ್ ಆಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.  ಇದೇ ವೇಳೆ ಇಥಿಯೋಪಿಯಾದ ಅಲ್ಮಝ್ ಅಯಾನ ಐಎಎಎಫ್ ವರ್ಷದ ಮಹಿಳಾ ಅಥ್ಲೀಟ್ ಆಗಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಅಲ್ಮಝ್ ಅಯಾನ ರಿಯೋ ಒಲಿಂಪಿಕ್ಸ್‌ನ ಮಹಿಳೆಯರ 10,000 ಮೀ ಓಟದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಬೋಲ್ಟ್ ಈ ಮೊದಲು 2008, 2009, 2011, 2012 ಮತ್ತು 2013ರಲ್ಲಿ ಐಎಎಎಫ್ ವರ್ಷದ ಪುರುಷರ ಅಥ್ಲೀಟ್ ಆಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News