ಸಚಿನ್ ತೆಂಡೂಲ್ಕರನ್ನು ಕಿಡ್ನ್ಯಾಪ್ ಮಾಡಬೇಕು ಎಂದ ಬ್ರಿಟಿಷ್ ಮಾಜಿ ಪ್ರಧಾನಿ !

Update: 2016-12-03 06:54 GMT

ಲಂಡನ್,ಡಿ.3 :ಪ್ರಸಕ್ತ ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ವಿಜಯಕ್ಕಾಗಿ ಪರದಾಡುತ್ತಿರುವುದನ್ನು ಕಂಡು ಕನಿಕರಗೊಂಡಿರುವ ಮಾಜಿ ಬ್ರಿಟಿಷ್ ಪ್ರಧಾನಿ ನೀಡಿದ ಪ್ರತಿಕ್ರಿಯೆ ತಮಾಷೆಯೇ ಸರಿ, ಇಂಗ್ಲೆಂಡ್ ತಂಡವನ್ನು ತರಬೇತುಗೊಳಿಸಲು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಕಿಡ್ನ್ಯಾಪ್ ಮಾಡಬೇಕು ಎಂದು ಶನಿವಾರ ನಡೆದ ಹಿಂದುಸ್ತಾನ್ ಟೈಮ್ಸ್ ಲೀಡರ್ ಶಿಪ್ ಸಮ್ಮಿಟ್ ನಲ್ಲಿ ಮಾತನಾಡುತ್ತಾ ಡೇವಿಡ್ ಕ್ಯಾಮರಾನ್ ಹೇಳಿದರು.

ಭಾರತ ಹಾಗೂ ಬ್ರಿಟನ್ ನಡುವಣ ಸಂಬಂಧಗಳು ಬಹಳಷ್ಟು ಪ್ರಮುಖ ಎಂದು ಹೇಳಿದ ಅವರು ಎರಡೂ ದೇಶಗಳು ಇತಿಹಾಸ ಹಾಗೂ ಸಂಸ್ಕೃತಿ ಕ್ಷೇತ್ರಗಳಲ್ಲಿ ಸಹಭಾಗಿತ್ವ ಹೊಂದಿದೆಯಲ್ಲದೆ ಆಧುನಿಕ ಯುಗದಲ್ಲಿ ನೌಕರಿ ಹಾಗೂಬಂಡವಾಳ ಕ್ಷೇತ್ರಗಳಲ್ಲಿಯೂ ಜತೆಯಾಗಿವೆ ಎಂದರು

‘‘ಪ್ರತಿ ಬಾರಿ ನಾನು ಭಾರತಕ್ಕೆ ಬಂದಾಗ ಇಲ್ಲಿನ ಅಭಿವೃದ್ಧಿಯನ್ನು ಕಂಡು ಆಶ್ಚರ್ಯ ಪಡುತ್ತೇನೆ’’ ಎಂದು ಕಿಕ್ಕಿರಿದ ಸಭಾಂಗಣದಲ್ಲಿ ಸಭಿಕರ ಕರತಾಡನದ ನಡುವೆ ಅವರು ಹೇಳಿದರು. ಭಾರತ ಮತ್ತು ಇಂಗ್ಲೆಂಡ್ ಸುಂದರ ಆಟವಾದ ಕ್ರಿಕೆಟ್ ನಲ್ಲೂ ಜತೆಯಾಗಿವೆ ಎಂದು ತಿಳಿಸಿದರಲ್ಲದೆ ಇಂಗ್ಲೆಂಡ್ ತಂಡ ಐದು ಪಂದ್ಯಗಳ ಸರಣಿಯಲ್ಲಿ ಇಷ್ಟರ ತನಕ ಎರಡರಲ್ಲಿ ಸೋತಿರುವ ಬಗ್ಗೆ ಉಲ್ಲೇಖಿಸುತ್ತಾ ‘‘ಸರಣಿ ಮುಂದುವರಿಯುತ್ತಿರುವ ರೀತಿಯನ್ನು ನೋಡಿದಾಗನಾವು ಅವರನ್ನು (ಸಚಿನ್ ತೆಂಡೂಲ್ಕರ್) ಕಿಡ್ನ್ಯಾಪ್ ಮಾಡಿ ನಮ್ಮ ತಂಡಕ್ಕೆ ತರಬೇತಿ ನೀಡಬೇಕು’’ ಎಂದರು.

ಮುಂದೆ ಮಾತನಾಡುತ್ತಾಅವರು ‘‘ಯಾವತ್ತೂ ಬರಾಕ್ ಒಬಾಮ ಜತೆ ಗಾಲ್ಫ್ ಆಡಬಾರದು ( ನೀವು ಗೆಲ್ಲಲು ಸಾಧ್ಯವೇ ಇಲ್ಲ), ಸಿಲ್ವಿಯೊ ಬರ್ಲುಸ್ಕೋನಿ (ಇಟಲಿಯ ವಿವಾದಿತ ಪ್ರಧಾನಿ) ಜತೆ ಪಾರ್ಟಿಗೆ ತೆರಳಬಾರದುಹಾಗೂಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ60,000 ಜನರಿರುವ ಸಭಾಂಗಣದ ವೇದಿಕೆಗೆ ಪ್ರವೇಶಿಸಬಾರದು- ಕಾರಣ- ಮೋದಿಯ ವಾಕ್ಚಾತುರ್ಯಕ್ಕೆ ನೀವು ಸರಿಗಟ್ಟಲಾರಿರಿ ಎಂದು ಸಭಿಕರ ನಗುವಿನ ನಡುವೆ ಕ್ಯಾಮರಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News