ಮುಸ್ಲಿಮರು ಸುಶಿಕ್ಷತರಾಗಲು ಜಮಾಅತ್‌ಗಳು ಮುತುವರ್ಜಿ ವಹಿಸಲಿ: ಡಾ.ಫಾರೂಕ್ ನಈಮಿ

Update: 2016-12-03 10:12 GMT

ಕಾಪು, ಡಿ.3: ಮುಸ್ಲಿಮ್ ಸಮುದಾಯ ಧಾರ್ಮಿಕ ಶಿಕ್ಷಣದೊಂದಿಗೆ ಕೆಜಿಯಿಂದ ಪಿಜಿವರೆಗಿನ ಲೌಕಿಕ ಶಿಕ್ಷಣವನ್ನು ಪಡೆಯುವ ಮೂಲಕ ಸುಶಿಕ್ಷಿತ ಸಮುದಾಯವಾಗಿ ಮೂಡಿಬರಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಯೊಂದು ಜಮಾಅತ್‌ಗಳು ಕಾರ್ಯನಿರ್ವಹಿಸಬೇಕೆಂದು ಡಾ.ಫಾರೂಕ್ ನಈಮಿ ಕೊಲ್ಲಂ ಹೇಳಿದ್ದಾರೆ.
ಮೂಳೂರಿನ ಅಲ್ ಇಹ್ಸಾನ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ 20ನೆ ವಾರ್ಷಿಕ ಮಹಾ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ ಜಮಾಅತ್ ಸಂಗಮ ದಲ್ಲಿ ‘ಜಮಾಅತ್ ಆಡಳಿತ ಮತ್ತು ಅಭಿವೃದ್ಧಿ’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
ಇಸ್ಲಾಂ ಧರ್ಮ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಿದೆ. ಪ್ರತಿಯೊಂದು ಜಮಾಅತ್‌ಗಳು ಶಿಕ್ಷಣದ ಬಗ್ಗೆ ಪ್ರತಿಯೊಂದು ಕುಟುಂಬದ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವ ಮೂಲಕ ಅವರ ಪ್ರತಿಭೆಗೆ ಬೆಳಕಾಗಬೇಕು ಎಂದು ಅವರು ತಿಳಿಸಿದರು.
 
ಉಡುಪಿ ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಸೈಯದ್ ಜಾಫರ್ ಅಸ್ಸಖಾಫ್ ತಂಙಳ್ ದುವಾ ನೆರವೇರಿಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ತೌಫೀಕ್ ನಾವುಂದ ವಹಿಸಿದ್ದರು. ಉಡುಪಿ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕರ್ ನೇಜಾರು, ಸಂಯುಕ್ತ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ. ಬಾವ ಹಾಜಿ, ರೇಂಜ್ ಜಂಇಯ್ಯತುಲ್ ಮುಅಲ್ಲಿಮ್ ಉಡುಪಿ ಜಿಲ್ಲಾಧ್ಯಕ್ಷ ಹಾಜಿ ಅಬೂಬಕ್ಕರ್ ಮುಸ್ಲಿಯಾರ್, ಎಸ್‌ವೈಎಸ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಮೊಯ್ದಿನ್ ಗುಡ್‌ವಿಲ್, ಮೂಳೂರು ಅಂಜುಮಾನ್ ಖಾದಿಮುಲ್ ಮುಸ್ಲಿಮೀನ್ ದಫ್ ಸಮಿತಿಯ ಅಧ್ಯಕ್ಷ ಅಬೂ ಮುಹಮ್ಮದ್, ಉಚ್ಚಿಲ ಸೈಯದ್ ಅರಬಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ, ಸಂಯುಕ್ತ ಜಮಾಅತ್ ಗೌರವಾಧ್ಯಕ್ಷ ಹಾಜಿ ಅಬ್ದುರ್ರಝಾಕ್ ಮೂಳೂರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕೋಶಾಧಿಕಾರಿ ಖಾಸಿಂ ಬಾರ್ಕೂರು, ಆಬಿದ್ ಬ್ಯಾರಿ, ಎಂ.ಎಚ್.ಬಿ.ಮುಹಮ್ಮದ್ ಬಜ್ಪೆ, ಬಶೀರ್ ಮದನಿ ಕಟಪಾಡಿ ಉಪಸ್ಥಿತರಿದ್ದರು.
ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು. ಬಾವ ಹಾಜಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News