ಉಡುಪಿಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ

Update: 2016-12-03 10:48 GMT

ಉಡುಪಿ, ಡಿ.3: ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪ್ರದರ್ಶನ ಹಾಗೂ ಕೌಶಲ್ಯ ಪ್ರದರ್ಶನಗಳೊಂದಿಗೆ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಶನಿವಾರ ಜರಗಿತು.

ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಉದ್ಘಾಟಿಸಿ ಮಾತನಾಡಿದರು. ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಾದ ಟಿ.ಎಸ್.ಹುಸೈನ್, ಶಿಕ್ಷಣ ಯಶವಂತ್, ಗಿರೀಶ್ ಗಾಣಿಗ, ಶುಭಂ ಶೆಟ್ಟಿ, ಮಂಜುಳಾ ಸುಭಾಷ್, ರಾಧಾಕೃಷ್ಣ, ಅಬ್ದುಲ್ ಶರೀಫ್ ರಿಗೆ ಸನ್ಮಾನ ಹಾಗೂ ರಾಜ್ಯಮಟ್ಟದಲ್ಲಿ ಉಡುಪಿಯ ಪ್ರಕಾಶ್ ಖಾರ್ವಿಯವರಿಗೆ ವೈಯಕ್ತಿಕ ಮತ್ತು ಆಶಾ ನಿಲಯ ವಿಶೇಷ ಶಾಲೆಗೆ ಉತ್ತಮ ಸಂಸ್ಥೆ ಪ್ರಶಸ್ತಿಯನ್ನು ಪ್ರದಾನ ಮಾಡುವರು.

ಜಿಲ್ಲೆಯ ನಾಲ್ವರು ವಿಕಲಚೇತನರನ್ನು ವಿವಾಹವಾದರಿಗೆ 50,000 ರೂ. ಪ್ರೋತ್ಸಾಹಧನದ ಬ್ಯಾಂಕ್ ಠೇವಣಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಐವರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಶಿಕ್ಷಣ ಮತ್ತು ಕ್ರೀಡಾ ಪ್ರತಿಭಾವಂತರಿಗೆ, ವಿಶೇಷ ಶಾಲಾ ಮಕ್ಕಳಿಗೆ, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷ ನಳಿನಿ ಪ್ರದೀಪ್ ರಾವ್, ವಕೀಲರ ಸಂಘದ ಅಧ್ಯಕ್ಷ ದಯಾನಂದ ಕೆ., ಸಿಂಡಿಕೇಟ್ ಬ್ಯಾಂಕ್‌ನ ಲಿಯಾಕತ್ ಅಲಿ, ಜಯಕರ ಶೆಟ್ಟಿ ಇಂದ್ರಾಳಿ, ಜಿಪಂ ಉಪಕಾರ್ಯದರ್ಶಿ ಡಿ.ಎಸ್.ರಾಯ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲಿಸ್, ನಗರಸಭಾಧ್ಯಕ್ಷ ಮಂಜುನಾಥಯ್ಯ, ಜೈ ವಿಠಲ್, ವಿಲ್ಫ್ರೆಡ್ ಗೋಮ್ಸ್ ಕಾಂತಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಕೆಎಂಸಿ ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನಗೊಂಡಿತು. ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ನಿರಂಜನ್ ಭಟ್ ಸ್ವಾಗತಿಸಿ, ಪ್ರಾಸ್ತಾವಕ ನುಡಿಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News