×
Ad

ಪರವಾನಿಗೆ ರಹಿತವಾಗಿ ಲಾರಿಯಲ್ಲಿ ಮರದ ದಿಮ್ಮಿಗಳ ಸಾಗಾಟ : ಆರೋಪಿಯ ಬಂಧನ

Update: 2016-12-03 17:35 IST

ಪುತ್ತೂರು, ಡಿ.3 : ಪರವಾನಿಗೆ ರಹಿತವಾಗಿ ಮರದ ದಿಮ್ಮಿಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಸಮೀಪ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್‌ರವರ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ , ಕೋಡಿಂಬಾಳದಿಂದ ಬಂಟ್ವಾಳಕ್ಕೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಸ್ವರಾಜ್ ಮಜ್ದ ಲಾರಿಯು  ಪರವಾಣಿಗೆ ರಹಿತವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಆರೋಪಿ ಚಾಲಕ ಬಂಟ್ವಾಳ ಕಜೆಕ್ಕಾರು ಪಾಂಡವರಕಲ್ಲು ನಿವಾಸಿ ಸಾಬುಲ್ಲ ಎಂಬಾತನನ್ನು ಬಂಧಿಸಿರುವ ಪೊಲೀಸರು ಲಾರಿ ಹಾಗೂ ಅದರಲ್ಲಿದ್ದ 4 ಚಿರ್ವೆ, 8 ಹೆಬ್ಬಲಸುವಿನ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಲಾರಿಯ ಮೌಲ್ಯ ರೂ. 85ಸಾವಿರವಾಗಿದ್ದು, ಮರದ ಮೌಲ್ಯ ರೂ. 80ಸಾವಿರ ಎಂದು ಅಂದಾಜಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಎ.ಎಸ್.ಐ ಲೋಕನಾಥ್, ಕಾನ್‌ಸ್ಟೇಬಲ್‌ಗಳಾದ ಹರೀಶ್, ಲಿಂಗಪ್ಪ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News