×
Ad

ಅಕ್ರಮ ಕಟ್ಟಿಗೆ ಸಾಗಾಟ ಪತ್ತೆ

Update: 2016-12-03 17:54 IST

ಮಂಗಳೂರು,ಡಿ.3: ಕಾರ್ಕಳ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಎರಡು ಲಾರಿಗಳನ್ನು ಚೇಳ್ಯಾರು ಗ್ರಾಮದ ಮುಕ್ಕ ಎಂಬಲ್ಲಿ ಶುಕ್ರವಾರ ತಡೆದು ನಿಲ್ಲಿಸಿದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಟ್ಟಿಗೆ ಸಾಗಾಟ ಮಾಡುವ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.

ಕಟ್ಟಿಗೆ ಸಮೇತ ಲಾರಿಗಳನ್ನು ವಶಕ್ಕೆ ಪಡೆದ ಅರಣ್ಯ ಸಂಚಾರಿ ಅಧಿಕಾರಿಗಳು ಆರೋಪಿಗಳ ವಿರುದ್ಧ ಕ್ರಮ ಜರಗಿಸಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ವೌಲ್ಯ 6 ಲಕ್ಷ ರೂ. ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಆರೋಪಿಗಳಾದ ವಿಜಯ್ ಹಿರ್ಗಾನ ಮತ್ತು ರಾಜು ಹಿರ್ಗಾನ ಎಂಬವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News