ಬಂಟ್ವಾಳ : ಗ್ರೇಟ್ ಪ್ರಭಾತ್ ಸರ್ಕಸ್‌ಗೆ ಚಾಲನೆ
ಬಂಟ್ವಾಳ , ಡಿ.3 : ಸುಮಾರು 78 ವರ್ಷಗಳ ಇತಿಹಾಸವನ್ನು ಹೊಂದಿರುವ ಗ್ರೇಟ್ ಪ್ರಭಾತ್ ಸರ್ಕಸ್‌ಗೆ ಜೋಡುಮಾರ್ಗ ಉದ್ಯಾನವನದ ಮುಂಭಾಗದ ಮೈದಾನದಲ್ಲಿ ಶುಕ್ರವಾರ ರಾತ್ರಿ ವರ್ಣರಂಜಿತ ಚಾಲನೆ ದೊರೆಯಿತು.
ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಉದ್ಘಾಟಿಸಿದರು.
ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷಸುದರ್ಶನ್ ಜೈನ್, ಪುರಸಭಾ ಸದಸ್ಯರಾದ ವಸಂತಿ ಚಂದಪ್ಪ, ಚಂಚಲಾಕ್ಷಿ, ಜಸಿಂತ ಡಿಸೋಜ, ಪ್ರಭಾ ಆರ್. ಸಾಲ್ಯಾನ್, ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಬಂಟ್ವಾಳ, ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಕಳ್ಳಿಗೆ ಗ್ರಾಪಂ ಸದಸ್ಯ ಮುಧುಸೂದನ್ ಶೆಣೈ ಸಹಿತ ಸಂಸ್ಥೆಯ ಮಾಲಕ ಸಾಯಿಬಾಬ, ಮೆನೇಜರ್ ದೇವರಾಜು ಮೊದಲಾದವರು ಉಪಸ್ಥಿತರಿದ್ದರು.
ಬಳಿಕ 150ಕ್ಕೂ ಹೆಚ್ಚು ಕಲಾವಿದರಿಂದ ನಡೆದ ವಿವಿಧ ಕಸರತ್ತು ಪ್ರೇಕ್ಷಕರನ್ನು ರಂಜಿಸಿತು.
ದಕ್ಷಿಣ ಆಫ್ರಿಕಾದ ನಾಲ್ವರು ಯುವ ಕಲಾವಿದರ ಹಾಸ್ಯ ಭರಿತ ಕಸರತ್ತು, ಗ್ಲೋಬೋ ರೈಡಿಂಗ್, ಜಿಮ್ನಾಸ್ಟಿಕ್, ಫೈಯಿಂಗ್ ಟ್ರೂಪಿಸ್, ಮೋಟರ್ ಬೈಕ್ ಜಂಪಿಂಗ್, ಸ್ಕೈವಾಕ್, ಬೇಬಿರೋಪ್, ಸೈಕಲ್ ಬ್ಯಾಲೆನ್ಸ್, ಆಸ್ಟ್ರೇಲಿಯನ್ ಗಿಳಿಗಳು, ಜೂಲಿ ನಾಯಿಗಳ ವಿವಿಧ ಕಸರತ್ತು ಮನರಂಜಿಸಿತು.
ನಾಲ್ಕು ಆನೆಗಳ ಶಿವಲಿಂಗ ಪೂಜೆ ವಿಶೇಷ ಗಮನ ಸೆಳೆಯಿತು.