×
Ad

ಹಜ್, ಉಮ್ರಾ ಶುಲ್ಕ ರದ್ದು ಮಾಡಿದ ಸೌದಿ ?

Update: 2016-12-03 20:53 IST

ಜಿದ್ದಾ, ಡಿ. 3: ಈ ವರ್ಷದಿಂದ ಹಜ್ ಮತ್ತು ಉಮ್ರಾ ವೀಸಾ ಶುಲ್ಕಗಳನ್ನು ರದ್ದುಪಡಿಸುವ ರಾಜಾಜ್ಞೆಯೊಂದನ್ನು ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್ ಹೊರಡಿಸಿದ್ದಾರೆ ಎಂದು ಹಜ್ ಮತ್ತು ಉಮ್ರಾದ ಉನ್ನತ ಸಮಿತಿಯ ಸದಸ್ಯ ನಾಸಿರ್ ತೋರುಕ್ ಘೋಷಿಸಿದ್ದಾರೆ.
ಹೊಸದಾಗಿ ಹೇರಲಾಗಿರುವ ಶುಲ್ಕ ದುಬಾರಿಯಾಗಿದೆ ಎಂಬುದಾಗಿ ಈಜಿಪ್ಟ್ ಮತ್ತು ಇತರ ದೇಶಗಳ ಮುಸ್ಲಿಮರು ಪ್ರತಿಭಟಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ‘ಅಲ್‌ಬೊರ್ಸ ನ್ಯೂಸ್’ ವರದಿ ಮಾಡಿದೆ.
ವೀಸಾ ಶುಲ್ಕ ರದ್ದತಿಯ ಜೊತೆಗೆ, ಹಜ್ ಮತ್ತು ಉಮ್ರಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪರವಾನಿಗೆ ಪಡೆದ ಕಂಪೆನಿಗಳಿಗೆ ತಲಾ ಎರಡು ಉಚಿತ ವೀಸಾಗಳನ್ನು ನೀಡುವ ನಿರ್ಧಾರವನ್ನೂ ಸೌದಿ ಅರೇಬಿಯ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News