‘ಸ್ಮಾರ್ಟ್ ಸಿಟಿ’ಗೆ ತಾಂತ್ರಿಕ ಸಲಹಾ ತಂಡ: ಪರಿಣಿತರಿಂದ ಅರ್ಜಿ ಆಹ್ವಾನ

Update: 2016-12-03 17:49 GMT

ಮಂಗಳೂರು, ಡಿ.3: ಮಂಗಳೂರು ನಗರವು ಸ್ಮಾರ್ಟ್ ಸಿಟಿ ಯೋಜನೆಯ 2ನೆ ಹಂತದ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದು, ಪ್ರಸ್ತಾವನೆಯಲ್ಲಿ ಸಲ್ಲಿಸಿರುವಂತೆ ಯೋಜನೆಗಳನ್ನು ಯೋಜನಾಬದ್ಧವಾಗಿ ‘ಸ್ಮಾರ್ಟ್ ಸಿಟಿ ಮಿಷನ್’ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸುವ ಬಗ್ಗೆ ‘ಮಂಗಳೂರು ಸ್ಮಾರ್ಟ್ ಸಿಟಿ ಕಂಪೆನಿ’ಯನ್ನು ಸ್ಥಾಪಿಸಿ ಆ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುವುದು. ಯೋಜನೆಗೆ ಪೂರಕ ತಾಂತ್ರಿಕ, ಆರ್ಥಿಕ, ಪರಿಸರ, ಮಾಹಿತಿ ತಂತ್ರಜ್ಞಾನ, ನಗರ ಯೋಜನೆ, ವಾಸ್ತುಶಿಲ್ಪ, ಹಣಕಾಸು ವ್ಯವಸ್ಥೆಯಲ್ಲಿ ಪರಿಣತ ಹೊಂದಿದವರನ್ನು ಒಟ್ಟು ಸೇರಿಸಿ ‘ಥಿಂಕ್ ಟ್ಯಾಂಕ್’ ಗುಂಪನ್ನು ರಚಿಸಿ ಅವರಿಂದ ಯೋಜನೆಗೆ ಪೂರಕವಾಗಿ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ಪಡೆಯಲು ನೇಮಿಸಿಕೊಳ್ಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅದರಂತೆ ಒಂದು ‘ತಾಂತ್ರಿಕ ಸಲಹಾ ತಂಡ’ವನ್ನು ನಗರ ಮಟ್ಟದಲ್ಲಿ ರಚಿಸುವ ಅಗತ್ಯವಿದೆ.

ಈ ತಂಡವನ್ನು ರಚಿಸುವ ಹಾಗೂ ತಂಡದಲ್ಲಿ ಭಾಗವಹಿಸುವ ಕುರಿತು ತಾಂತ್ರಿಕ, ಆರ್ಥಿಕ, ಪರಿಸರ, ಮಾಹಿತಿ ತಂತ್ರಜ್ಞಾನ, ನಗರ ಯೋಜನೆ, ವಾಸ್ತುಶಿಲ್ಪ, ಹಣಕಾಸು ವ್ಯವಸ್ಥೆಯಲ್ಲಿ ಅರ್ಹ ಹಾಗೂ ಅನುಭವವಿರುವ ಮತ್ತು ಸ್ವಯಂ ಇಚ್ಛೆಯಲ್ಲಿ ತಾಂತ್ರಿಕ ಸಲಹಾ ತಂಡದಲ್ಲಿ ಭಾಗವಹಿಸಿ ಮಾಹಿತಿಯನ್ನು ಹಂಚಿಕೊಳ್ಳುವ ಬಗ್ಗೆ ಅರ್ಹ ತಾಂತ್ರಿಕ ಪರಿಣತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ತಮ್ಮ ಸಂಪೂರ್ಣ ಮಾಹಿತಿ ಹಾಗೂ ಸಂಬಂಧಪಟ್ಟ ವಿಭಾಗದಲ್ಲಿರುವ ತಮ್ಮ ಅನುಭವ ಸಹಿತವಾಗಿ ಅರ್ಜಿಯನ್ನು ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ, ಲಾಲ್‌ಬಾಗ್, ಎಂ.ಜಿ.ರಸ್ತೆ, ಮಂಗಳೂರು- 575003 ಇವರಿಗೆ ಡಿ.19ರೊಳಗೆ ತಲುಪುವಂತೆ ಪ್ರಕಟನೆಯಲ್ಲಿ ಕೋರಲಾಗಿದೆ. ಮಾಹಿತಿಯನ್ನು ಇ-ಮೇಲ್ commissioner_mcc@gmail.com ನಲ್ಲೂ ಕಳುಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 9449032144 ಅಥವಾ 0824-2220321ರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಮನಪಾ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News