ಅರಿವು ಜ್ಞಾನಕ್ಕಿಂತ ಮಿಗಿಲು: ಡಾ.ನಾ.ಮೊಗಸಾಲೆ
ಉಡುಪಿ, ಡಿ.3: ಜೀವನದಲ್ಲಿ ಜ್ಞಾನಕ್ಕಿಂತ ಅರಿವು ಮುಖ್ಯ. ಪ್ರತಿಯೊ ಬ್ಬನೂ ತಮ್ಮ ಜೀವನದಲ್ಲಿ ಅರಿವಿನ ಮಹತ್ವವನ್ನು ತಿಳಿಯಬೇಕು ಎಂದು ವೈದ್ಯ ಸಾಹಿತಿ ಡಾ.ನಾರಾಯಣ ಮೊಗಸಾಲೆ ಹೇಳಿದ್ದಾರೆ.
ಉಡುಪಿ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಭಾವಪ್ರಕಾಶ ಸಭಾಂಗಣದಲ್ಲಿ ನ.30ರಂದು ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆತ್ಮ ಎಂದರೆ ಪ್ರಜ್ಞೆ. ಆದುದರಿಂದ ನಾವೆಲ್ಲರೂ ಪ್ರಜ್ಞಾವಂತರಾಗಿ, ಕ್ರಿಯಾ ಶೀಲರಾಗಿ ಚತುರ್ವಿದ ಪುರುಷಾರ್ಥಗಳ ಮೂಲ ತತ್ವ ಮನಗಂಡು ವೈದ್ಯ ಕೀಯ ವೃತ್ತಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಮತ್ತು ಅನುಭಾವ ಜ್ಞಾನ ದಿಂದ ಜೀವನವನ್ನು ಮುನ್ನಡೆಸಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ವಹಿಸಿ ದ್ದರು. ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕಿ ಡಾ. ಮಮತಾ ಕೆ.ವಿ. ವಿದ್ಯಾರ್ಥಿ ಸಂಘದ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿಯ ಮುಖ್ಯಸ್ಥ ಸುಬ್ರಹ್ಮಣ್ಯ ಭಟ್ ಪಿ. ಮಾತನಾಡಿದರು.
ಸಂಘದ ವಿವಿಧ ಚಟುವಟಿಕೆಗಳ ಕಾರ್ಯದರ್ಶಿಗಳಾದ ವೃಶಾಂಕ್ ವಿ. ಗಾತೊಂಡೆ, ಪ್ರಜ್ಞ ಪ್ರಮೋದ್ ಹೆಗ್ಡೆ, ಡಾ.ಲೀನು ಸಿ.ಬಿ., ಶ್ಯಾಮ್ ಪ್ರಸಾದ್ ಕೆ., ಆತ್ರೇಯ ನಾರಾಯಣ ಭಟ್, ಶಿವಾನಿ ಸುರೇಶ್ ಕಾರಂತ್, ಡಾ. ಯಾಗಿಕ್ ಮಿಶ್ರ, ಸ್ವಾತಿ ಎನ್., ರಮ್ಯ ರಾವ್, ಸಚಿನ್ ಕೆ.ಆರ್. ಮೊದ ಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿತ್ಯಶ್ರೀ ಸ್ವಾಗತಿಸಿದರು. ಕಾರ್ಯದರ್ಶಿ ಕಸ್ತೂರಿ ರಂಗನ್ ವಂದಿಸಿದರು. ಸ್ವಾತಿ ಮತ್ತು ಸ್ವಾತಿ ಭಟ್ ಕಾರ್ಯಕ್ರಮ ನಿರೂಪಿಸಿದರು.