ಕಡಿವಾಣಕ್ಕೆ ಮಂಗಳೂರು ಸೆಂಟ್ರಲ್ ಕಮಿಟಿ ಆಗ್ರಹ
Update: 2016-12-03 23:45 IST
ಮಂಗಳೂರು, ಡಿ.3: ಬಾಬರಿ ಮಸೀದಿ ಧ್ವಂಸಗೊಂಡ ಡಿ.6ರಂದು ದ.ಕ. ಜಿಲ್ಲೆಯಲ್ಲಿ ಸೆ.144 ಜಾರಿಯಲ್ಲಿರುತ್ತದೆ. ಹಾಗಾಗಿ ಅಂದು ಯಾವುದೇ ಸಾರ್ವಜನಿಕ ಸಭೆಯಾಗಲೀ, ಪ್ರತಿಭಟನೆಯಾಗಲೀ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದರೂ ಮಂಗಳೂರಿನ ರಥಬೀದಿಯ ವೆಂಕಟರಮಣ ದೇವಸ್ಥಾನದ ಎದುರುಗಡೆಯ ರಸ್ತೆಯಲ್ಲಿ ವೇದಿಕೆಯನ್ನು ನಿರ್ಮಿಸಿ ಪೂಜೆ ಪುನಸ್ಕಾರದ ನೆಪದಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಒಂದು ಸಮುದಾಯವನ್ನು ಅಪಹಾಸ್ಯ ಮಾಡುವ ಕೃತ್ಯವಾಗಿದೆ. ಹಾಗಾಗಿ ಈ ವಿಜಯೋತ್ಸವಕ್ಕೆ ಕಡಿವಾಣ ಹಾಕಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ನಿಯೋಗ ಮಂಗಳೂರು ನಗರ ಪೊಲೀಸ್ ಉಪಾಯುಕ್ತರ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಸಂಘದ ಅಧ್ಯಕ್ಷ ಅಲಿ ಹಸನ್, ಅಬ್ದುಲ್ ಅಝೀಝ್, ಅಯ್ಯೂಬ್, ಮುನೀರ್ ಮುಕ್ಕಚೇರಿ ನಿಯೋಗದಲ್ಲಿದ್ದರು.