ಮಾಣಿ ಕಬಡ್ಡಿ: ಕೋಡಿ ಫ್ರೆಂಡ್ಸ್ ತಂಡಕ್ಕೆ ಅವಳಿ ಪ್ರಶಸ್ತಿ

Update: 2016-12-04 04:08 GMT

ವಿಟ್ಲ, ಡಿ.4: ಮಾಣಿಯ ಕೋಡಿ ಫ್ರೆಂಡ್ಸ್ ಆಶ್ರಯದಲ್ಲಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ 60 ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟವು ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು ಮಾಣಿ ಗುತ್ತು ಸಚಿನ್ ರೈ ಉದ್ಘಾಟಿಸಿದರು. ಮಾಣಿ ಗ್ರಾಪಂ ಅಧ್ಯಕ್ಷೆ ಮಮತಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಮಂಜುಳಾ ಕುಶಲ ಎಂ. ಪೆರಾಜೆ, ಮಾಣಿ ಗ್ರಾಪಂ ಸದಸ್ಯರಾದ ಸುದೀಪ್ ಶೆಟ್ಟಿ ಕೊಡಾಜೆ, ಗಣೇಶ್ ಶೆಟ್ಟಿ ಸಾಗು, ಲಲಿತಾ, ಮಾಜಿ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ, ಯಶೋಧರ ಪೂಜಾರಿ ಕೊಡಾಜೆ-ಮಾಣಿ, ದೈಹಿಕ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ, ಹಿರಿಯ ಕಬಡ್ಡಿ ಆಟಗಾರ ದಾಮೋದರ ಪೈ ಮಾಣಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಾಣಿ ಗ್ರಾಪಂ ಸದಸ್ಯ ನಾರಾಯಣ ಶೆಟ್ಟಿ ಹಾಗೂ ತಾಪಂ ಮಾಜಿ ಸದಸ್ಯ ಕುಶಲ ಎಂ. ಪೆರಾಜೆ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಕಬಡ್ಡಿ ಆಟಗಾರ ಮಜೀದ್ ಮಾಣಿ, ಜಯಂತ ಕೋಡಿ, ಮನೋಜ್, ಸದಾಶಿವ, ರಾಜೇಶ, ಬೇಬಿ ಸುವರ್ಣ ಕೊಡಾಜೆ, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು. ನರಸಿಂಹ ಮಾಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಡಿ ಫ್ರೆಂಡ್ಸ್ ತಂಡಕ್ಕೆ ಅವಳಿ ಪ್ರಶಸ್ತಿ 24 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದಲ್ಲಿ ಕೋಡಿ ಫ್ರೆಂಡ್ಸ್ ಮಾಣಿ ತಂಡವು ಪ್ರಥಮ ಹಾಗೂ ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ವಿಷ್ಣಮೂರ್ತಿ ಕುಂಡ ತಂಡವು ದ್ವಿತೀಯ ಹಾಗೂ ವಿಷ್ಣುಮೂರ್ತಿ ಪೆರ್ನೆ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಕೋಡಿ ಫ್ರೆಂಡ್ಸ್ ತಂಡದ ನವೀನ ಉತ್ತಮ ದಾಳಿಗಾರ, ಹನೀಫ್ ಉತ್ತಮ ಹಿಡಿತಗಾರ ಹಾಗೂ ಕುಂಡಡ್ಕ ತಂಡದ ಅತುಲ್ ಆಲ್‌ರೌಂಡರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News