ಫೈಝಲ್ ಹತ್ಯೆ: ಸಂಘಪರಿವಾರದ ಇಬ್ಬರು ಮುಖ್ಯ ಆರೋಪಿಗಳ ಸೆರೆ
ತಿರೂಂರಂಙಾಡಿ, ಡಿ. 4: ಕೊಡಿಂಞಿಯಲ್ಲಿ ನಡೆದಿದ್ದ ಮತಾಂತರಗೊಂಡ ಯುವಕ ಫೈಝಲ್ ಹತ್ಯೆ ಪ್ರಕರಣದ ಇಬ್ಬರು ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಅಡಗಿಕೂತಿದ್ದ ಆರೋಪಿಗಳನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರೆಂದು ಸೂಚನೆ ಲಭಿಸಿವೆ. ಇವರು ಸಂಚರಿಸಿದ್ದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಕೃತ್ಯದಲ್ಲಿ ಭಾಗವಹಿಸಿದ್ದ ಇತರ ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಸಂಚು ಹೆಣೆದಿದ್ದ ಎಂಟು ಮಂದಿಯನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು.
ಕಳೆದ ತಿಂಗಳು 19ಕ್ಕೆ ಪತ್ನಿಯ ತಂದೆ ಮತ್ತು ತಾಯಿಯಯನ್ನು ತಾನೂರ್ ರೈಲ್ವೆ ಸ್ಟೇಶನ್‌ನಿಂದ ಕರೆದುಕೊಂಡು ಬರಲು ಆಟೊರಿಕ್ಷಾದಲ್ಲಿ ಹೋಗುತ್ತಿದ್ದಾಗ ಫಾರೂಕ್ ನಗರದಲ್ಲಿ ಬೈಕ್‌ನಲ್ಲಿ ಬಂದ ತಂಡ ಫೈಝಲ್‌ನನ್ನು ಕೊಂದು ಹಾಕಿತ್ತು. ಪೈಝಲ್ ಇಸ್ಲಾಮ್ ಧರ್ಮ ಸ್ವೀಕರಿಸಿದ್ದು ಕೊಲೆಕೃತ್ಯಕ್ಕೆ ಕಾರಣವಾಗಿತ್ತು. ಕಳೆದ ಜುಲೈಯಲ್ಲಿ ಫೈಝಲ್ ಊರಿಗೆ ಬಂದಾಗ ಅವರ ಪತ್ನಿ ಮತ್ತು ಇಬ್ಬರುಮಕ್ಕಳು ಇಸ್ಲಾಂ ಸ್ವೀಕರಿಸಿದ್ದರು. ಸಹೋದರಿಯ ಮಕ್ಕಳು ಕೂಡಾ ಧರ್ಮ ಬದಲಿಸಬಹುದೆಂದು ಹೆದರಿ ಸಹೋದರಿಯ ಪತಿಯಾದ ವಿನೋದ್ ತನ್ನ ಸಂಘಟನೆಯ ಸ್ಥಳೀಯ ನಾಯಕರನ್ನು ಸಂಪರ್ಕಿಸಿದ್ದನು. ತಿರೂರ್‌ನ ಪ್ರಮುಖ ಕೇಸರಿ ಸಂಘಟನೆಯ ನಾಯಕನ ನಿರ್ದೇಶದಂತೆ ಮೂವರು ಕಳೆದ ತಿಂಗಳು 19ಕ್ಕೆ ಬೆಳಗ್ಗೆ ಕೊಡಿಂಞಿಗೆ ಬಂದು ಕೊಲೆಕೃತ್ಯವೆಸಗಿದ್ದರು ಎಂದು ವರದಿ ತಿಳಿಸಿದೆ.