ಹಣ ಸಿಗಲಿಲ್ಲ, ಓರಿಯಂಟಲ್ ಬ್ಯಾಂಕ್‌ನ ಬೋರ್ಡ್ ಕಿತ್ತುಹಾಕಿ ದಾಂಧಲೆಗಿಳಿದ ಗ್ರಾಮಸ್ಥರು !
Update: 2016-12-04 13:24 IST
ಹೊಸದಿಲ್ಲಿ, ಡಿ. 4: ಹರಿಯಾಣದಲ್ಲಿ ನೋಟು ಬದಲಾಯಿಸಲು ಬಂದ ಗ್ರಾಮಸ್ಥರು ಧನ್‌ಪುರಿಯ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಶಾಖೆಯಲ್ಲಿ ದಾಂಧಲೆ ಎಬ್ಬಿಸಿದ ಘಟನೆ ವರದಿಯಾಗಿದೆ. ಐದು ಆರು ಗಂಟೆಗಳ ಕಾಲ ಕ್ಯೂ ನಿಂತರೂ ಗ್ರಾಮಸ್ಥರಲ್ಲಿ ಹಲವರಿಗೆ 2000ರೂಪಾಯಿ ಮಾತ್ರ ಸಿಕ್ಕಿತ್ತು. ಇದರಿಂದ ಕೋಪಗೊಂಡ ಜನರ ಗುಂಪು ಬ್ಯಾಂಕ್‌ನಲ್ಲಿ ದಾಂಧಲೆಗೈದಿದೆ. ಬ್ಯಾಂಕ್‌ನೌಕರರಿಗೆ ದಿಗ್ಬಂಧನ ವಿಧಿಸಿದೆ. ಪೊಲೀಸರು ಆಗಮಿಸಿದ ಬಳಿಕ ಜನರು ಬ್ಯಾಂಕ್ ನೌಕರರನ್ನು ಬಿಡುಗಡೆಗೊಳಿಸಿದ್ದಾರೆ. ಕಪ್ಪುಹಣದವರಿಗೆ ನೆರವಾಗುವ ಬ್ಯಾಂಕ್ ನೌಕರರು ಪರಿಚಯಸ್ಥರಿಗೆ ಮಾತ್ರವೇ ಹಣ ನೀಡುತ್ತಿದ್ದಾರೆಂದು ಪ್ರತಿಭಟಿಸಿದ ಗ್ರಾಮಸ್ಥರು ಹೇಳಿದ್ದಾರೆ. ಮೊನ್ನೆ ಸಂಜೆ ವೇಳೆ ಈ ಘಟನೆ ನಡೆದಿದ್ದು. ಕೋಪತಪ್ತಜನರು ಬ್ಯಾಂಕ್ ನ ಬೋರ್ಡನ್ನು ಕಿತ್ತು ಹಾಕಿ ಘೋಷಣೆ ಕೂಗುತ್ತಿರುವ ದೃಶ್ಯಗಳು ಬ್ಯಾಂಕ್‌ನ ಸಿಸಿಟಿವಿಯಲ್ಲಿ ದಾಖಲುಗೊಂಡಿದೆ ಎಂದು ವರದಿ ತಿಳಿಸಿದೆ.