ಈ ಕಾಡಿಗೆ ಸಾಯಲೆಂದೇ ಬರುತ್ತಾರೆ ಜನರು !
ನೀವು ಜಗತ್ತಿನಲ್ಲಿರುವ ಬಹಳಷ್ಟು ಕಾಡುಗಳ ಬಗ್ಗೆ ತಿಳಿದುಕೊಂಡಿರಬಹುದು. ಆದರೆ ಜಗತ್ತಿನಲ್ಲಿ ಅತ್ಯಂತ ಭಯಾನಕ ಕಾಡು ಜಪಾನ್‌ನಲ್ಲಿದೆ. ಅಲ್ಲಿಗೆ ನೀವು ಹೋಗಲು ಕನಸ್ಸಿನಲ್ಲಿಯೂ ಇಷ್ಟಪಡಲಾರಿರಿ. ಯಾಕೆಂದರೆ ಇಲ್ಲಿಗೆ ಜನರು ಸುತ್ತಾಡಿಹೋಗಲು ಬರುವುದಿಲ್ಲ. ಬದಲಾಗಿ ಸಾಯಲು ಬರುತ್ತಾರೆ. ಈ ಕಾಡಿನ ಎಲ್ಲ ಕಡೆಯೂ ಅಸ್ಥಿಪಂಜರವೇ ಕಾಣಸಿಗುತ್ತವೆ.
ಅಲ್ಲಲ್ಲಿ ನೇತಾಡುತ್ತಿರುವ ಶವಗಳು. ನೆಲದಲ್ಲಿಬಿದ್ದುಕೊಂಡಿರುವ ಚಪ್ಪಲಿಶೂಗಳು.ಸ್ಮಶಾನಮೌನ. ಹೀಗೆ ಈ ಕಾಡು ಬಹಳ ಭಯಾನಕವಾಗಿದೆ. ಇದು ಯಾವುದೇ ಸಿನೆಮಾ ದ ಕಥೆಯಲ್ಲ. ಜಪಾನ್‌ನ ಈ ಕಾಡು ಮರಣಮೃದಂಗವೆಂದು ಕುಖ್ಯಾತವಾಗಿದೆ. ಬಹಳ ವಿಸ್ತಾರವಾಗಿರುವ ಈ ಕಾಡು ಸೂರ್ಯಕಿರಣಗಳು ಬೀಳದಷ್ಟುಅದು ದಟ್ವಾಗಿದೆ. ಈ ಕಾಡನ್ನು ಸುಸೈಡ್ ಫಾರೆಸ್ಟ್ ಅಥವಾ ಪಿಶಾಚಿಯಿರುವ ಕಾಡು ಎಂದು ಕರೆಯಲಾಗುತ್ತಿದೆ.
ಮೌಂಟ್ ಪೂಜಿ ಎಂಬ ಪರ್ವತದ ಹತ್ತಿರವಿರುವ ಈ ಕಾಡಿಗೆ ಯಾರಾದರೂ ಅಪ್ಪಿತಪ್ಪಿ ಕಾಲಿಟ್ಟರೆ ಆತ ಜೀವಂತ ಮರಳುವುದಿಲ್ಲ ಎಂಬ ನಂಬಿಕೆ ಪ್ರಚಲಿತದಲ್ಲಿದೆ.ಆದ್ದರಿಂದ ಇಲ್ಲಿ ಆತ್ಮಹತ್ಯೆಮಾಡಿಕೊಳ್ಳುವ ಬದಲು ಜನರು ಯಾರಿಂದಲಾದರೂ ನೆರವು ಪಡೆದು ಬದುಕಿರಿ ಎಂದು ಜಪಾನ್ ಸರಕಾರ ಕಾಡಿನ ಪ್ರವೇಶ ಸ್ಥಳದಲ್ಲಿ ಬೋರ್ಡ್ ಹಾಕಿದೆ.1950ನೆ ಇಸವಿಯಿಂದೀಚೆಗೆ ಇಲ್ಲಿ ಸುಮಾರು 500ಕ್ಕೂ ಅಧಿಕಮಂದಿ ಜೀವ ಕಳಕೊಂಡಿದ್ದಾರೆ. ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕೇವಲ 2010ರಲ್ಲಿ 267 ಮಂದಿ ಇಲ್ಲಿ ಆತ್ಮಹತ್ಯೆಮಾಡಿಕೊಳ್ಳಲು ಯತ್ನಿಸಿದ್ದರು.. ಇವರಲ್ಲಿ 54 ಮಂದಿ ಸತ್ತಿದ್ದಾರೆ. ಆತ್ಮಹತ್ಯೆಗೆ ಪ್ರಯತ್ನಿಸುವ ಜಪಾನಿಯರು ಮಾತ್ರವಲ್ಲ ವಿಶ್ವದಾದ್ಯಂತ ಆತ್ಮಹತ್ಯೆಮಾಡಿಕೊಳ್ಳ ಬಯಸುವ ಜನರು ಈಕಾಡನ್ನು ಇಷ್ಟಪಡುತ್ತಾರಂತೆ. ಈ ಕಾಡು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಜಗತ್ತಿನಲ್ಲಿಯೇ ಮೂರನೆ ಸ್ಥಾನವನ್ನುಪಡೆದಿದೆ.
ಜಪಾನಿಯರು ಈ ಕಾಡಿನಲ್ಲಿ ಪಿಶಾಚಿವಾಸಿಸುತ್ತಿದೆ ಎಂದು ನಂಬುತ್ತಾರೆ. ಕಾಡಿನಲ್ಲಿ ಸುತ್ತಾಡುವವರನ್ನು ತನ್ನ ಕಡೆಗೆ ಪಿಶಾಚಿ ತನ್ನೆಡೆಗೆ ಸೆಳೆಯುತ್ತದೆ ಎಂಬುದು ಅವರ ನಂಬಿಕೆಯಾಗಿದೆ ಎಂದು ವರದಿ ತಿಳಿಸಿದೆ.