ಎನ್‌ಎಂಪಿಟಿ ಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ವಿರೊಧ

Update: 2016-12-04 11:29 GMT

ಮಂಗಳೂರು ,ಡಿ.4:ನವಮಂಗಳೂರು ಬಂದರು ಮಂಡಳಿ ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಬಂದರು ಅಭಿವೃದ್ಧಿಯೋಜನೆಗೆ ಸಂಬಂಧಿಸಿದಂತೆ ಬೃಹತ್ ಬಂದರುಗಳ ಪ್ರಾಧಿಕಾರದ ಅಧ್ಯಕ್ಷರಿಗೆ ಕಳುಹಿಸಿರುವ ಪ್ರಸ್ತಾವನೆಗೆ ನಗರದ ಕೆನೆರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿ ಈ ಪ್ರಸ್ತಾವನೆಯನ್ನು ಮರು ಪರಿಶೀಲಿಸಲು ಆಗ್ರಹಿಸಿದೆ.

 ನವಮಂಗಳೂರು ಬಂದರಿನ 8ನೆ ಬರ್ತ್‌ನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಕಳುಹಿಸಿರುವ ಪ್ರಸ್ತಾವನೆ ವಾಸ್ತವಿಕ ಯೋಜನೆಗಳಿಂದ ದೂರವಾಗಿದೆ.ಪ್ರಸಕ್ತ ಬಂದರಿನ ಹೆಚ್ಚಿನ ವ್ಯವಹಾರ,ಚಟುವಟಿಕೆಗಳಿಗೆ ನೆರವಾಗುತ್ತಿರುವ ಈ ಬರ್ತ್‌ನ್ನು ಎನ್‌ಎಂ ಪಿಟಿಯೇ ನಿರ್ವಹಿಸುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಕೆಸಿಸಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News