ಕರ್ನಾಟಕ ಕೃಷಿ ಬೆಲೆ ಆ0ೋಗದ ಯೋಜನೆಗೆ ದರೆಗುಡ್ಡೆ ಗ್ರಾಮ ಆಯ್ಕೆ

Update: 2016-12-04 12:45 GMT

ಮೂಡುಬಿದಿರೆ , ಡಿ.4 :  ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಿವಿಧ ರೀತಿಯ ಕೃಷಿಗಳನ್ನು ಮಾಡುತ್ತಾ ಗುರುತಿಸಿಕೊಂಡಿರುವ ದ.ಕ ಜಿಲ್ಲೆಯ ಮಂಗಳೂರು ತಾಲ್ಲೂಕಿನ ದರೆಗುಡ್ಡೆ ಗ್ರಾಮವನ್ನು ಕರ್ನಾಟಕ ಕೃಷಿ ಬೆಲೆ ಆ0ೋಗದ ಯೋಜನೆಗೆ ಆಯ್ಕೆ ಮಾಡಲಾಗಿದೆ.

   ಕೃಷಿಕರ ಆದಾ0ುವನ್ನು ವೃದ್ಧಿಸುವುದು ಮತ್ತು ಅವರ ಕಲ್ಯಾಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯು ಇದಾಗಿದ್ದು. ಆಯ್ಕೆಯಾಗುವ ಗ್ರಾಮದ ಕೆಲವು ಕೃಷಿ ಪ್ರದೇಶಗಳಿಗೆ ರಾಜ್ಯ ಕೃಷಿ ಬೆಲೆ ಆ0ೋಗದ ಅಧ್ಯಕ್ಷ ಡಾ.ಟಿ.ಎನ್ ಪ್ರಕಾಶ್ ಕಮ್ಮರಡಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಈ ವಿಷ0ುವನ್ನು ಮಾಧ್ಯಮಕ್ಕೆ ತಿಳಿಸಿದರು.

ರೈತರ ಕಲ್ಯಾಣಕ್ಕೆ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಮತ್ತು ತನ್ಮೂಲಕ ರೈತರ ಆದಾಯ  ವೃದ್ಧಿಯಾಗಿದೆ, ಆಗದಿದ್ದಲ್ಲಿ ಅದಕ್ಕೆ ಕಾರಣವೇನು,ರೈತರ ಆರೋಗ್ಯ, ಜೀವನಮಟ್ಟ, ಮಣ್ಣಿನ ಆರೋಗ್ಯ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಹೇಗಿದೆ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಯೋಜನೆಗಳ ಅನುಷ್ಠಾನ ಮತ್ತು ಅದರಲ್ಲಾಗಿರುವ ಲೋಪದೋಷಗಳ ಬಗ್ಗೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  ರಾಜ್ಯದ ಎಂಟು ಜಿಲ್ಲೆಗಳಲ್ಲಿ ತಲಾ ಒಂದೊಂದು ಗ್ರಾಮವನ್ನು ಆಯ್ಕೆ ಮಾಡಿ ಅಲ್ಲಿನ ರೈತರ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದರು.

ದರೆಗುಡ್ಡೆಯಲ್ಲಿ ಜಿಲ್ಲಾ ಪಂಚಾ0ುತ್ ಮಾಜಿ ಅಧ್ಯಕ್ಷ ಗೋಪಾಲ್, ಪ್ರಗತಿಪರ ಕೃಷಿಕ ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ,ಜೆಮ್ಮಿ ಲೋಬೊ, ಮತ್ತಿತರರ ಕೃಷಿಕರ ಮನೆ ಮತ್ತು ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಪ್ರೊ. ಡಾ. ಶಿವಕುಮಾರ್ ಮಗದ, ಮಣ್ಣು ವಿಜ್ಞಾನಿ ಡಾ.ಪುನೀತ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಪ್ರಗತಿಪರ ಕೃಷಿಕ ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News