×
Ad

ನೋಟ್ ಬಂದಿ ಕೆ ಬಾದ್... ಜನಸಂಖ್ಯೆಗೆ ಕಡಿವಾಣ : ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್

Update: 2016-12-04 19:37 IST

ನವಾಡ, ಡಿ.4: ದೇಶದಲ್ಲಿ ‘ನೋಟ್ ಬಂದಿಯ’ (ನೋಟು ರದ್ದತಿ) ಬಳಿಕ ‘ನಸ್ಬಂದಿಗಾಗಿ’ (ಸಂತಾನ ಹರಣ) ಕಾಯ್ದೆ ಮಾಡಬೇಕಾದ ತುರ್ತು ಅಗತ್ಯವಿದೆಯೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಅವರ ಸಂಸದೀಯ ಕ್ಷೇತ್ರ ನವಾಡದಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಹಾಯಕ ಸಚಿವ ಸಿಂಗ್, ಜನಸಂಖ್ಯೆ ನಿಯಂತ್ರಣಕ್ಕಾಗಿ ಸಂತಾನ ಹರಣವನ್ನು ಸಮರ್ಥಿಸಿದರು.

ದೇಶದಲ್ಲಿ ಜನಸಂಖ್ಯೆ ಭಾರೀ ಹೆಚ್ಚಳವಾಗುತ್ತಿದ್ದು, ಅಭಿವೃದ್ಧಿ ಹಾಗೂ ಸಾಮಾಜಿಕ ಸ್ಥಿರತೆಗೆ ಅಡ್ಡಿಯಾಗಿದೆ. ಆದುದರಿಂದ, ಭಾರತಕ್ಕೆ ಸಂತಾನ ಹರಣ ಸಹಿತ ಬಲವಾದ ಜನಸಂಖ್ಯಾ ನಿಯಂತ್ರಣ ಕಾಯ್ದೆಯ ಅಗತ್ಯವಿದೆ ಎಂದವರು ಹೇಳಿದರು.

ಪ್ರಪಂಚದ ಜನಸಂಖ್ಯೆಯ ಶೇ.17ರಷ್ಟು ಭಾರತದಲ್ಲಿದೆ. ಪ್ರತಿ ವರ್ಷ ಅದಕ್ಕೆ ಆಸ್ಟ್ರೇಲಿಯದ ಜನಸಂಖ್ಯೆಯಷ್ಟು ಸೇರ್ಪಡೆಯಾಗುತ್ತಿದೆ. ದೇಶದಲ್ಲಿ ವಿಶ್ವದ ಶೇ.2.5ರಷ್ಟು ಮಾತ್ರ ಭೂಮಿಯಿದೆ ಹಾಗೂ ಕೇವಲ ಶೇ.4.2ರಷ್ಟು ಜಲ ಸಂಪನ್ಮೂಲವಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಜನಸಂಖ್ಯಾ ಸ್ಫೋಟವು ಅಭಿವೃದ್ಧಿಗೆ ದೊಡ್ಡ ತಡೆಯಗಿದೆ. ಈ ಸಮಸ್ಯೆ ನಿವಾರಿಸಲು ದೇಶಕ್ಕೆ ಜನಸಂಖ್ಯೆ ನಿಯಂತ್ರಣ ಕಾಯ್ದೆಯ ಅಗತ್ಯವಿದೆಯೆಮದು ಗಿರಿರಾಜ್ ಸಿಂಗ್ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News