×
Ad

ತೋಕೂರು ಕುಡಿಯುವ ನೀರಿನ ಪೂರೈಕೆಗೆ ಆಗ್ರಹ

Update: 2016-12-04 20:05 IST

ಮುಲ್ಕಿ , ಡಿ.4: ಪಡುಪಣಂಬೂರು ಗ್ರಾಮಪಂಚಾಯತಿಯ ತೋಕೂರು ಪಳ್ಳಿಗುಡ್ಡೆ ಎಂಬಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ ಎಂದು ಸ್ಥಳೀಯರಾದ ಮುಸ್ತಾಫಾ ರ ನೇತೃತ್ವದಲ್ಲಿ  ಶಾಸಕ ಅಭಯಚಂದ್ರಗೆ ದೂರು ನೀಡಿದ್ದಾರೆ.

ಸುಮಾರು 16.5 ಲಕ್ಷ ವೆಚ್ಚದಲ್ಲಿ ಡಾಮರೀಕರಣಗೊಂಡ ಪಡುಪಣಂಬೂರು ತೋಕೂರು ರಸ್ತೆಯ ಉದ್ಘಾಟನೆಗೆ ಆಗಮಿಸಿದ ಶಾಸಕರಿಗೆ ಸ್ಥಳೀಯರು ದೂರು ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು,  ಏಳಿಂಜೆ-ಕೊಲ್ಲೂರುಪದವು ಸುಮಾರು 18 ಕೋಟಿಯ ಕುಡಿಯುವ ನೀರಿನ ಯೋಜನೆ ಅಂತಿಮ ಹಂತದಲ್ಲಿದ್ದು ಕೂಡಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.

ಈ ಸಂದರ್ಭ ಶಾಸಕರೊಡನೆ ಮೂಡಾದ ಸದಸ್ಯ ವಸಂತ್ ಬೆರ್ನಾಡ್,ಧನಂಜಯ ಮಟ್ಟು,ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು,ವಿನೋದ್ ಸಾಲ್ಯಾನ್,ಇಂಜಿನಿಯರ್ ಪ್ರಶಾಂತ್ ಆಳ್ವ,ಗುತ್ತಿಗೆದಾರ ಸಂತೋಷ್ ಹೆಗ್ಡೆ ಇದ್ದರು.

ಬ್ಯಾನರುಗಳ ಮೇಲಾಟ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಡುಪಣಂಬೂರು ಗ್ರಾಮಪಂಚಾಯತಿಯ ತೋಕೂರು-ಎಸ್‌ಕೋಡಿ ರಸ್ತೆ ಡಾಮಾರೀಕರಣಗೊಂಡಿದ್ದು ಸ್ಥಳೀಯರಿಗೆ ಖುಷಿಯಾಗಿದ್ದರೆ,ಎರಡುರಾಜಕೀಯ ಪಕ್ಷಗಳು ತಮ್ಮ ಸಾಧನೆ ಎಂದು ಬಿಂಬಿಸಿ ಬ್ಯಾನರುಗಳನ್ನು ಹಾಕಿ ಸ್ಥಳೀಯರಿಗೆ ಪುಕ್ಕಟೆ ಮನೋರಂಜನೆ ಒದಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News