ಎಸ್ ಡಿಪಿಐ ಯಿಂದ ಉಚಿತ ಹೃದಯ ರೋಗ ತಪಾಸಣಾ ಶಿಬಿರ

Update: 2016-12-04 18:13 GMT

 ಪುತ್ತೂರು, ಡಿ.4 :   ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಬನ್ನೂರು ಮತ್ತು ಇಂಡಿಯಾನ ಆಸ್ಪತ್ರೆ ಹಾಗು ಹಾರ್ಟ್ ಇನ್ಸ್ಟಿಟ್ಯೂಟ್ ಮಂಗಳೂರು ಇದರ ವತಿಯಿಂದ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಹಾರಾಡಿ ಸ.ಉ.ಹಿ.ಪ್ರಾ ಶಾಲೆಯಲ್ಲಿ ನಡೆಯಿತು.

   ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ ಡಿಪಿಐ ದ.ಕ.ಜಿಲ್ಲಾ ಸಮಿತಿ ಸದಸ್ಯ ಜಾಬಿರ್ ಅರಿಯಡ್ಕ , ಪಕ್ಷವು  ದೇಶಾದ್ಯಂತ ಜನಪರ ಕಾರ್ಯಕ್ರಮದ ಮೂಲಕ ಸಕಾರಾತ್ಮಕ ರಾಜಕೀಯವನ್ನು ಮಾಡುತ್ತಿದೆ ಎಂದರು.

ಹಾರಾಡಿ ಶಾಲೆ ಮುಖ್ಯೋಪಾಧ್ಯಾಯರಾದ ಮುದುರ ಎಸ್ ಮಾತನಾಡಿ,  ಮನುಷ್ಯನಿಗೆ ಹಣಕ್ಕಿಂತಲೂ ಆರೋಗ್ಯವು ಮುಖ್ಯ, ಈ ನಿಟ್ಟಿನಲ್ಲಿ   ಎಸ್ಡಿಪಿಐ ಯ ಕಾರ್ಯ ಶ್ಲಾಘನೀಯ ಎಂದರು.

 ಪಾಪ್ಯುಲರ್ ಫ್ರಂಟ್  ಪುತ್ತೂರು ಅಧ್ಯಕ್ಷ ಸಂಶುದ್ದೀನ್, ಎಸ್ ಡಿಪಿಐ ಪುತ್ತೂರು ವಿಧಾನಸಭಾ ಅಧ್ಯಕ್ಷ ಕೆ.ಎ. ಸಿದ್ದೀಕ್ ಮಾತನಾಡಿದರು. 

ವೇದಿಕೆಯಲ್ಲಿ ಎಸ್ ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಅಶ್ರಫ್ ನಾವು,  ಡಿಯುವೈಎ ಅಧ್ಯಕ್ಷ ಮುಹಮ್ಮದ್ ಮಮ್ಮು ಬನ್ನೂರು, ಸಿಲ್ ಸಿಲಾ ವೆಲ್ಫೇರ್ ಎಸೋಸಿಯೇಷಣ್ ಬನ್ನೂರು  ಅಧ್ಯಕ್ಷ ಕೆ.ಎಂ. ಇಬ್ರಾಹಿಂ, ಬನ್ನೂರು ಮಸೀದಿ ಅಧ್ಯಕ್ಷ ಅಬೂಬಕ್ಕರ್, ಎಸ್ ಡಿಪಿಐ ಬನ್ನೂರು ಸದಸ್ಯ ಪು  ರಫೀಕ್ ಬಾಂಬೆ ಉಪಸ್ಥಿತರಿದ್ದರು.

ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬನ್ನೂರು ಘಟಕಾಧ್ಯಕ್ಷರಾದ ಮುಹಮ್ಮದ್ ಮೋನು ಅಧ್ಯಕ್ಷತೆ ವಹಿಸಿದ್ದರು

ಅಝೀಝ್ ಕೆಮ್ಮಾಯಿ ಸ್ವಾಗತಿಸಿ ನಿರೂಪಿಸಿದರು.

ಸುಮಾರು 90ಕ್ಕಿಂತಲೂ ಹೆಚ್ಚು ರೋಗಿಗಳು ಶಿಬಿರದ ಪ್ರಯೋಜನ ಪಡೆದರು.

ಇಂಡಿಯಾನ ಆಸ್ಪತ್ರೆಯ ವೈದ್ಯರಾದ ಡಾ| ದೇವವೃತ್ ಶೆಟ್ಟಿ, ಡಾ| ಸಮಿಯುಲ್ಲಾ ರೇಗೋ ಹಾಗೂ ಸಿಬ್ಬಂದಿಗಳು ಶಿಬಿರದಲ್ಲಿ ರೋಗಿಗಳಿಗೆ ಮಾಹಿತಿ ನೀಡಿದರು.

 ರಿಯಾಝ್, ಸಾಬಿರ್, ಆರಿಫ್, ಇಫಾಝ್, ಪವಾಝ್, ಹಾರಿಸ್ ಮುಕ್ವೆ, ಖಾದರ್ ಅಕ್ಕರೆ, ಇರ್ಷಾದ್, ಸಿರಾಜ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News