ರಾಮಕೃಷ್ಣ ಮಿಶನ್ ವತಿಯಿಂದ ‘ಸ್ವಚ್ಛ ಪುತ್ತೂರು’ ಯೋಜನೆಗೆ ಚಾಲನೆ

Update: 2016-12-04 18:30 GMT

ಪುತ್ತೂರು, ಡಿ.4: ಸ್ವಚ್ಛತೆ ವಿಚಾರದಲ್ಲಿ ಪೊರಕೆ ಹಿಡಿಯುವುದು ಎಂದರೆ ವ್ರತ ಕೈಗೊಂಡಂತೆ. ಈ ವ್ರತ ಎಂದಿಗೂ ಅರ್ಧದಲ್ಲಿ ನಿಲ್ಲಬಾರದು. ಪುತ್ತೂರು ಸಂಪೂರ್ಣ ಸ್ವಚ್ಛವಾಗುವ ತನಕ ವ್ರತಭಂಗವಾಗದಿರಲಿ. ಎಲ್ಲರೂ ಈ ವ್ರತವನ್ನು ಕೈಗೊಳ್ಳಬೇಕು ಎಂದು ಮಂಗಳೂರು ರಾಮಕೃಷ್ಣ ಮಿಷನ್‌ನ ಸ್ವಾಮಿ ಧರ್ಮವೃತಾನಂದಜೀ ಮಹಾರಾಜ್ ಹೇಳಿದರು.

ಅವರು ರವಿವಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಾಮಕೃಷ್ಣ ಮಿಷನ್ ಮಠದ ವತಿಯಿಂದ ಪುತ್ತೂರನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ‘ಸ್ವಚ್ಛ ಪುತ್ತೂರು’ ಎಂಬ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಅತಿಥಿಯಾಗಿದ್ದ ವಿಧಾನ ಪರಿಷತ್‌ನ ವಿಪಕ್ಷ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಡಾ. ಎಂ.ಕೆ.ಪ್ರಸಾದ್, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿದರು.

ವಿನೋದ್ ನಗರ ಸ್ವಾಗತಿಸಿ, ಶ್ರೀಕೃಷ್ಣ ಉಪಾಧ್ಯಾಯ ಪ್ರಸ್ತಾವನೆಗೈದರು. ನಿಕೇತ್‌ರಾಜ್ ವೌರ್ಯ ವಂದಿಸಿದರು. ಶ್ಯಾಮ ಸುದರ್ಶನ ಭಟ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News