×
Ad

ಜಯಲಲಿತಾಗೆ ಹೃದಯಾಘಾತ; ಆಘಾತಕ್ಕೊಳಗಾದ ಕಾರ್ಯಕರ್ತ ಸಾವು

Update: 2016-12-05 11:26 IST

ಚೆನ್ನೈ,ಡಿ.5: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯಾಘಾತ ಸುದ್ದಿ ಟಿವಿಯಲ್ಲಿ ವೀಕ್ಷಿಸಿದ ಎಐಎಡಿಎಂಕೆಯ ಕಾರ್ಯಕರ್ತನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಕಡಲೂರು ಜಿಲ್ಲೆಯ ಸನ್ಯಾಸಿಪೇಟೈ ಎಂಬಲ್ಲಿ ನಡೆದಿದೆ.
ಸನ್ಯಾಸಿಪೇಟೈ ನಿವಾಸಿ ಎಐಎಡಿಎಂಕೆಯ ಕಾರ್ಯಕರ್ತ ನೀಲಕಂಠನ್ ಎಂಬವರು ಜಯಲಲಿತಾ ಅವರ  ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿಯನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದರು. ಅಷ್ಟರಲ್ಲಿ ಅವರಿಗೆ  ತೀವ್ರ ಹೃದಯಾಘಾತ ಉಂಟಾಯಿತು. ಕುಸಿದು ಬಿದ್ದ ನೀಲಕಂಠನ್‌  ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News