×
Ad

ಒಂದು ಕುಟುಂಬದ ಬಳಿ 2 ಲಕ್ಷ ಕೋಟಿ ಅಂದ್ರೆ ತಮಾಷೆನಾ ....

Update: 2016-12-05 11:40 IST

ಹೊಸದಿಲ್ಲಿ, ಡಿ.5:  ಸೆಪ್ಟಂಬರ್ ತಿಂಗಳಿನಲ್ಲಿ ಕೊನೆಗೊಂಡ ಆದಾಯ ಘೋಷಣಾ ಯೋಜನೆಯನ್ವಯ ಮುಂಬೈ ಮೂಲದ ಕುಟುಂಬವೊಂದು  ರೂ 2 ಲಕ್ಷ ಕೋಟಿ ಆದಾಯ ಘೋಷಿಸಿದ್ದರೂ ಆದಾಯ ತೆರಿಗೆ ಇಲಾಖೆ ಅದನ್ನು ತಿರಸ್ಕರಿಸಿದೆ.  ಇಷ್ಟೊಂದು ಭಾರೀ ಮೊತ್ತದ ಆದಾಯ ಘೋಷಿಸಿರುವ ಕುಟುಂಬದ ಸದಸ್ಯರ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂಬೈಯ ಬಾಂದ್ರಾ ನಿವಾಸಿಗಳೆಂದು  ದಾಖಲೆಗಳಲ್ಲಿ ಹೇಳಿಕೊಂಡು ರೂ. 2 ಲಕ್ಷ ಕೋಟಿ ಆದಾಯ ಘೋಷಣೆಯನ್ನು ಆ ಕುಟುಂಬದ ನಾಲ್ಕು ಸದಸ್ಯರಾದ ಅಬ್ದುಲ್ ರಝಾಕ್ ಮೊಹಮ್ಮದ್ ಸೈಯದ್, ಮೊಹಮ್ಮದ್ ಆರಿಫ್ ಅಬ್ದುಲ್ ಸೈಯದ್ (ಪುತ್ರ), ರುಖ್ಸಾನ ಅಬ್ದುಲ್ ರಝಾಖ್ ಸೈಯದ್ (ಪತ್ನಿ) ಹಾಗೂ ನೂರ್ ಜಹಾನ್ ಮೊಹಮ್ಮದ್ ಸೈಯದ್ (ಸಹೋದರಿ) ಮಾಡಿದ್ದಾರೆಂದು ವಿತ್ತ ಸಚಿವಾಲಯ ಹೇಳಿದೆ.

ಈ ಆದಾಯ ಘೋಷಣೆಯು ``ಶಂಕಾಸ್ಪದ ಸ್ವರೂಪದ್ದಾಗಿದ್ದು  ಸಣ್ಣ  ಆದಾಯ ಹೊಂದಿದ ಜನರು ಮಾಡಿದ್ದಾರೆ'' ಎಂದು ಸಚಿವಾಲಯ ಹೇಳಿದೆ. ಆದಾಯ ಘೋಷಣಾ ಯೋಜನೆಯನ್ವಯ ಸರಕಾರ ಕಾಳಧನಿಕರಿಗೆ ತಮ್ಮ ಆದಾಯ ಘೋಷಿಸಿ ಶೇ.45 ರಷ್ಟು  ತೆರಿಗೆ ಪಾವತಿಸಲು  ನಾಲ್ಕು ತಿಂಗಳ ಸಮಯಾವಕಾಶ ಒದಗಿಸಿತ್ತು.
 
ಸೈಯದ್ ಕುಟುಂಬ ಘೋಷಿಸಿದ ಆದಾಯದ ಪ್ರಮಾಣವನ್ನು  ಹೋಲಿಕೆ ಮಾಡುವ ಐದು ಅಂಶಗಳು ಇಲ್ಲಿವೆ: 

1. ಅವರು ಘೋಷಿಸಿದ ರೂ.2 ಲಕ್ಷ ಕೋಟಿ ಆದಾಯವು  ಆದಾಯ ಘೋಷಣಾ ಯೋಜನೆಯನ್ವಯ ಘೋಷಿಸಲ್ಪಟ್ಟ ಒಟ್ಟು ರೂ.67,382 ಕೋಟಿ  ಮೊತ್ತದ  ಮೂರು ಪಟ್ಟು ಅಧಿಕವಾಗಿದೆ. ಸಚಿವಾಲಯ ಘೋಷಿಸಿದ ಮೊತ್ತವು ರೂ.13,860 ಕೋಟಿ ಆದಾಯ ಘೋಷಣೆ ಮಾಡಿದ ಅಹ್ಮದಾಬಾದ್ ಮೂಲದ ಮಹೇಶ್ ಕುಮಾರ್ ಚಂಪಕ್ ಲಾಲ್ ಶಾ ಆದಾಯವನ್ನು  ಹೊರತು ಪಡಿಸಿದೆ.

2. ಸೈಯದ್ ಕುಟುಂಬ ಘೋಷಣೆ ಮಾಡಿದ ಆದಾಯವು  ಕಳೆದ ವರ್ಷ ವಿದೇಶಿ ಆಸ್ತಿ ಘೋಷಣಾ ಯೋಜನೆಯನ್ವಯ ಘೋಷಿಸಲ್ಪಟ್ಟ ಒಟ್ಟು ರೂ.3,770 ಕೋಟಿಗಿಂತ  53 ಪಟ್ಟು ಅಧಿಕವಾಗಿದೆ.

3. ಈ ಮೊತ್ತವು  ರದ್ದುಗೊಂಡಿರುವ 500 ಹಾಗೂ 1000 ರೂಪಾಯಿ ನೋಟುಗಳ ಒಟ್ಟು ಮೌಲ್ಯ, ಅಂದರೆ ರೂ.14 ಲಕ್ಷ ಕೋಟಿಯನ್ನು ಹೋಲಿಸಿದರೆ ಅದರ ಶೇ.14 ರಷ್ಟಿದೆ.
 
4. ಈ ಕುಟುಂಬ ಘೋಷಿಸಿದ ಒಟ್ಟು ಆದಾಯವು  ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲಿಸ್ಟ್ ಮಾಡಲ್ಪಟ್ಟ ಎಲ್ಲಾ ಕಂಪೆನಿಗಳ ಮಾಕರ್ೆಟ್ ಕ್ಯಾಪಿಟಲೈಸೇಶನ್  ಇದರ ಶೇ 2 ರಷ್ಟಿದೆ. ಮೇಲಾಗಿ ಆ ಮೊತ್ತವು ಭಾರತದ ಅತ್ಯಂತ ಮೌಲ್ಯಯುತ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸವರ್ಿಸಸ್  ಇದರ ಮಾರುಕಟ್ಟೆ ಮೌಲ್ಯದ ಶೇ 45 ರಷ್ಟಿದೆ.
 
5.  ಮುಂಬೈ ಕುಟುಂಬ ಘೋಷಿಸಿದ ಆದಾಯವನ್ನು ಹೋಲಿಸಿದರೆ  ಆದಾಯ ಘೋಷಣಾ ಯೋಜನೆಯನ್ವಯ  ಸುಮಾರು 65,000 ಮಂದಿ ಘೋಷಿಸಿದ ಸರಾಸರಿ ಆದಾಯವು ಕೇವಲ ರೂ.1 ಕೋಟಿಯಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News