ಜಯಲಲಿತಾ ಪರಿಸ್ಥಿತಿ ಚಿಂತಾಜನಕ
Update: 2016-12-05 13:18 IST
ಚೆನ್ನೈ, ಡಿ. 5 : ರವಿವಾರ ಸಂಜೆ ಹೃದಯ ಸ್ಥಂಭನಕ್ಕೆ ಒಳಗಾದ ಬಳಿಕ ಆರೋಗ್ಯ ಬಿಗಡಾಯಿಸಿರುವ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಅಧಿಕೃತ ಪ್ರಕಟಣೆ ತಿಳಿಸಿದೆ. ಸೋಮವಾರ ಮಧ್ಯಾಹ್ನ ಸುಮಾರು 12. 50 ಕ್ಕೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ " ಜಯಲಲಿತಾ ಅವರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಅವರೀಗ ಎಕ್ಮೋ (ECMO - ಎಕ್ಸ್ಟ್ರಾ ಕಾರ್ಪೊರಿಯಲ್ ಲೈಫ್ ಸಪೋರ್ಟ್ ) ಹಾಗು ಇತರ ಜೀವ ರಕ್ಷಕ ಸಾಧನಗಳ ನೆರವಿನಲ್ಲಿದ್ದಾರೆ. ತಜ್ಞರ ತಂಡ ಅವರ ಮೇಲೆ ನಿಗಾ ಇಟ್ಟಿದ್ದು ಸೂಕ್ತ ಚಿಕಿತ್ಸೆ ನೀಡುತ್ತಿದೆ " ಎಂದು ತಿಳಿಸಿದೆ.
Continuous treatment is being given using ECMO to Puratchi Thalaivi Amma- Apollo Hospital
— AIADMK (@AIADMKOfficial) December 5, 2016