ಪ್ರಾಮಾಣಿಕತೆಯ ಪ್ರತಿರೂಪ ಅನಿಲ್ ಕುಮಾರ್ (ಫೈಝಲ್) ನನ್ನ ಮನೆಮಗನಂತೆ ಇದ್ದರು

Update: 2016-12-05 08:22 GMT

ಸತ್ಯಸಂಧತೆ, ಪರಿಶುದ್ಧ ಜೀವನ ಶೈಲಿ, ಕೆಲಸದಲ್ಲಿ ಪ್ರಾಮಾಣಿಕತೆ- ಇಸ್ಲಾಂ ಸ್ವೀಕರಿಸಿದ್ದಕ್ಕಾಗಿ ಮಲಪ್ಪುರಂನ ಕೊಡಿಂಞಿಯಲ್ಲಿ  ಕಳೆದ ತಿಂಗಳು ಬರ್ಬರವಾಗಿ ಕೊಲೆಯಾದ ಫೈಝಲ್‌ರನ್ನು ಅವರ ಸೌದಿ ಅರೇಬಿಯದ ಸ್ಫೋನ್ಸರ್ (ಪ್ರಯೋಜಕ) ಅಬ್ದುಲ್ಲ ಅಲ್ಲ್ಮುಹಾವಿಸ್ ಈ ರೀತಿ ಸ್ಮರಿಸಿಕೊಂಡಿದ್ದಾರೆ. 

ಫೈಝಲ್‌ರೊಂದಿಗಿನ ನಾಲ್ಕುವರ್ಷಗಳ ಜೀವನಾನುಭವಗಳನ್ನು ಒಂದೊಂದಾಗಿ ವಿವರಿಸುವಾಗ ಕೊಡಿಂಞಿಯ ಫೈಝಲ್‌ರ ಮನೆಯ ಅದೇ ದುಃಖ ಸೌದಿಯ ರಾಜಧಾನಿ ರಿಯಾದ್‌ನ ಬದೀಅ ಗ್ರಾಮದ ಅಬ್ದುಲ್ಲ ಅಲ್‌ಉಹಾವಿಸ್‌ರ ಮನೆಯಲ್ಲಿಯೂ ಮಡುಗಟ್ಟಿ ನಿಂತಿದೆ. " ಮಕ್ಕಳಂತೆ ನಾನು ಪೈಝಲ್‌ನನ್ನು ಪ್ರೀತಿಸಿದ್ದೆ , ಅವನೊಂದಿಗೆ ವರ್ತಿಸಿದ್ದೆ. ಮುಸ್ಲಿಮ್ ಆಗಿ ನಮ್ಮ ಮನೆಗೆ ಅನಿಲ್‌ಕುಮಾರ್ ಎಂಬ ಯುವಕ ಕೆಲಸಕ್ಕೆ ಬಂದಿರಲಿಲ್ಲ. ಮೂರುವರೆವರ್ಷ ಮುಸ್ಲಿಮ್ ಅಲ್ಲದ ಆ ಯುವಕ ನಮ್ಮೊಡನಾಡಿ ಆಗಿದ್ದರು. ಆರಂಭದ ಅಪರಿಚಿತತೆ ಸ್ವಲ್ಪ ಸಮಯದಲ್ಲಿಯೇ ದೂರವಾಗಿತ್ತು. ಕೆಲಸದಲ್ಲಿ ಬದ್ಧತೆ ತೋರಿಸುತ್ತಿದ್ದ ಫೈಝಲ್ ಯಾವತ್ತೂ ಯಾವ ಕೆಲಸವನ್ನು ಕೂಡಾ ಮಾಡಲು ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿರಲಿಲ್ಲ.ಮನೆಗೆ ಸಣ್ಣ ಸಣ್ಣ ಸಾಮಾನುಗಳನ್ನು ಖರೀದಿಸುವುದು, ವಾಹನಕ್ಕೆ ಪೆಟ್ರೊಲ್ ಹಾಕುವುದು ಇದರ ಬಿಲ್‌ಗಳು ತೆಗೆದಿಟ್ಟು ಅದರ ಲೆಕ್ಕವನ್ನು ಕೊಡುತ್ತಿದ್ದರು. ಅದು ಬೇಕಾಗಿಲ್ಲ ಎಂದು ಹೇಳಿದರೂ  ಫೈಝಲ್ ಕೇಳುತ್ತಿರಲಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಈ ಯುವಕ ತೋರಿಸಿದ ಪ್ರಮಾಣಿಕತೆಯನ್ನು ಕೆಲಸ ಮಾಡಿದ ಮನೆಯವರು ನೆನಪಿಸಿಕೊಳ್ಳುತ್ತಾರೆ.

 ಯಾಕೆ ಫೈಝಲ್‌ರೊಡನೆ ಇಂತಹ ಕ್ರೌರ್ಯ ತೋರಿಸಲಾಯಿತು ಎಂಬ ನೋವು ಮುಹಾವಿಸ್‌ರ ಮನಸ್ಸಿನಲ್ಲಿ ತುಂಬಿಕೊಂಡಿದೆ. ಇಲ್ಲಿ ( ಸೌದಿ ) ಎಷ್ಟೆಲ್ಲ ಸಂಸ್ಥೆಗಳಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು. ಧರ್ಮ ಇಲ್ಲದವರು ಒಟ್ಟಿಗೆ ಸೌಹಾರ್ದದಿಂದ ಬದುಕುತ್ತಾರೆ. ಎಲ್ಲಿಯೂ ಯಾರನ್ನೂ ಧರ್ಮ ಪರಿಗಣಿಸಿ ವ್ಯವಹಾರವಿಲ್ಲವಲ್ಲ. ಬೇರೆಬೇರೆ ಭಾಷೆ ಧರ್ಮ ಹೊಂದಿರುವ ಭಾರತೀಯರು ಪರಸ್ಪರ ಸಹಕರಿಸಿ ಸಾಹೋದರ್ಯದಿಂದ ಊರಲ್ಲಿಯೂ ಇಲ್ಲಿಯೂ ವಾಸಿಸುತ್ತಿದ್ದಾರೆ. ಮತ್ತೇಕೆ ಹೀಗಾಯಿತು ಎಂದು ನೋವಿನಿಂದ ಅವರು ಕೇಳುತ್ತಾರೆ. ಫೈಝಲ್‌ರನ್ನು ಇಲ್ಲದ್ದಾಗಿಸಿದ್ದರಿಂದ ಯಾರು  ಏನು ಸಾಧಿಸಿದ್ದಾರೆ? ಧರ್ಮದ ಕೋಮಿನ ಹೆಸರಿನಲ್ಲಿ ಜನರು ಯಾಕೆ ಈರೀತಿ ದೊಡ್ಡ ಗೋಡೆ ಕಟ್ಟಿಕೊಳ್ಳುತ್ತಿದ್ದಾರೆ?ಫೈಝಲ್‌ರ ಮರಣದಿಂದ ಅತೀವ ದುಃಖವಾಗಿದ್ದರೂ ಪರಲೋಕದಲ್ಲಿ ಗಳಿಸಿದ ಮಹತ್ತಾದ ಸಾಧನೆಯನ್ನು ನೆನೆದು ಆ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಅಲ್‌ಮುಹಾವಿಸ್ ಹೇಳುತ್ತಾರೆ. ಜನನದಿಂದಲೇ ಮುಸ್ಲಿಂ ಆದ ನನಗೆ ಸಾಧಿಸಲು ಆಗದ ಮಹಾನ್ ಹುತಾತ್ಮ ಪದವಿ ಫೈಝಲ್‌ಗೆ ಸಿಕ್ಕಿದೆ ಎಂಬುದನ್ನು ಅವರು ಅಭಿಮಾನದಿಂದ ಸ್ಮರಿಸಿಕೊಂಡಿದ್ದಾರೆ.

ಎರಡು ವರ್ಷ ಮೊದಲು ರಜೆ ಮುಗಿಸಿ ಬಂದಿದ್ದ ಅನಿಲ್ ಕುಮಾರ್ ಆನಂತರವೂ ತನ್ನ ಧರ್ಮ ಪ್ರಕಾರವೇ ಜೀವಿಸಿದ್ದರು. ನಂತರ ಕಳೆದ ರಮಝಾನ್‌ಗೆ ಮುಂಚೆ ಇಸ್ಲಾಂ ಸ್ವೀಕರಿಸಲು ಇಚ್ಛೆ ಪ್ರಕಟಿಸಿದ್ದರು. ಮುಸ್ಲಿಮ್ ಆಗುವುದರೊಂದಿಗೆ ಅಲ್‌ಉಹಾವಿಸ್‌ರ ಪುತ್ರ ಫೈಝಲ್‌ರ ಹೆಸರನ್ನು ಸ್ವೀಕರಿಸಿದ್ದರು. ಕಳೆದ ರಮಝಾನ್ ಸಮಯದಲ್ಲಿ ವಾಸಸ್ಥಳಕ್ಕೆ ಸಮೀಪದ ಮಸೀದಿಯಲ್ಲಿ ಇಫ್ತಾರ್ ಟೆಂಟ್‌ಗಳಲ್ಲಿ ಫೈಝಲ್ ಉಪಸ್ಥಿತರಿರುತ್ತಿದ್ದರು. ನೆರೆಯವರಲ್ಲಿ, ಮಸೀದಿಗೆ ಬರುವವರಲ್ಲಿ ಗೆಳೆಯರಲ್ಲಿ ಫೈಝಲ್ ಸೌಹಾರ್ದ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಹೆಚ್ಚಿನ ಕನಸುಗಳೊಂದಿಗೆ ಕಳೆದ ರಜೆಯಲ್ಲಿ ಊರಿಗೆ ಹೋದರು.

ಪತ್ನಿ ಮಕ್ಕಳಿಗೆ ಇಸ್ಲಾಮಿನ ಬಾಲಪಾಠಗಳನ್ನು ಕಲಿಸಿಕೊಡಬೇಕು. ಅವರನ್ನುಸಂದರ್ಶನ ವೀಸಾದಲ್ಲಿ ಕರೆತರಬೇಕು. ಮುಂತಾದ ಆಶೆ ಅವರಿಗಿತ್ತು. ಅದೇ ಉದ್ದೇಶವನ್ನು ಊರಿಗೆ ಹೋಗುವ ಮೊದಲು ಸ್ಫೋನ್ಸರ್‌ಗೆ ತಿಳಿಸಿದ್ದರು. ಊರಿನ ಕೆಲಸಗಳನ್ನ ಸರಿಪಡಿಸಲಿಕ್ಕಾಗಿ ಹೆಚ್ಚು ರಜೆಯನ್ನು ಕೇಳಿದ್ದರು. ಆರು ತಿಂಗಳ ರಿಎಂಟ್ರಿಯನ್ನು ನೀಡಿ ಫೈಝಲ್‌ರನ್ನು ಸ್ಪೋನ್ಸರ್ ಊರಿಗೆ ಕಳುಹಿಸಿದ್ದರು. ಕೊಲೆಯಾಗುವುದಕ್ಕಿಂತ ಮುಂಚಿನ ದಿವಸ ಸ್ಪೋನ್ಸರ್‌ಗೆ ರಿಕಾರ್ಡ್ ಮೆಸೇಜ್ ಕಳುಹಿಸಿ ಮರಳಿ ಬರುವುದನ್ನು ತಿಳಿಸಿದ್ದರು. ಆದರೆ ರಜೆ ಮುಗಿಸಿ ಸೌದಿಗೆ ಬರುವ ಮೊದಲೇ ಪೈಝಲ್‌ರ ಜೀವನ ಕೊನೆಗೊಂಡಿತು.ರಜೆಗಿಂತ ಮೊದಲು ನವೀಕರಿಸಿದ್ದ ಇಕಾಮಕ್ಕೆ ಇನ್ನೂ ನಾಲ್ಕು ವರ್ಷದ ಕಾಲಾವಧಿ ಇದೆ.

 ಅಬ್ದುಲ್ಲ ಮುಹಾವೀಸ್‌ ನಾಲ್ಕು ಬಾರಿ ಭಾರತಕ್ಕೆ ಹೋಗಿದ್ದಾರೆ. ಮುಂಬೈದಿಲ್ಲಿಗೆ ಭೇಟಿ ನೀಡಿದ್ದಾರೆ ಇನ್ನು ಕೇರಳಕ್ಕೂ ಹೋಗಬೇಕಿದೆ. ಫೈಝಲ್‌ರ ಮನೆಯವರನ್ನು ಭೇಟಿಯಾಗಿ ತಂದೆತಾಯಿ ಮತ್ತು ಮಕ್ಕಳನ್ನು ಸಂತೈಸಬೇಕು. ಇದಕ್ಕಾಗಿ ಅವರು ಗೂಗಲ್ ಮ್ಯಾಪ್‌ನಲ್ಲಿ ಮಲಪ್ಪುರಂನ ಕೊಡಿಂಞಿಯನ್ನು ಗುರುತು ಹಾಕಿಟ್ಟುಕೊಂಡಿದ್ದಾರೆ. ಫೈಝಲ್‌ರ ಸ್ಮರಣೆಗಾಗಿ ಮಾಧ್ಯಮಗಳಲ್ಲಿ ಬಂದ ವೀಡಿಯೊ ಕ್ಲಿಪ್‌ಗಗಳನ್ನು ಮುಹಾವೀಸ್ ಕುಟುಂಬ ಸಂಗ್ರಹಿಸಿಟ್ಟುಕೊಂಡಿದೆ. ಭಾರತದಲ್ಲಿ ವಿಶೇಷವಾಗಿ ಕೇರಳೀಯರು ಸೌಮ್ಯ ಸ್ವಭಾವ ಮತ್ತು ಗೌರವದಿಂದ ವರ್ತಿಸುವವರು ಆಗಿದ್ದಾರೆ. ಹೀಗಿದ್ದೂ ಈ ನಾಡಿನಲ್ಲಿ ಧರ್ಮದ ಹೆಸರಿನಲ್ಲಿ ಕ್ರೂರವಾಗಿ ಒಬ್ಬನನ್ನು ಕೊಲ್ಲಲಾಗಿದೆ ಎಂಬುದನ್ನು ನಂಬಲು ಆಗುವುದಿಲ್ಲ. ಫೈಝಲ್‌ರ ಗ್ರಾಮದಿಂದಲೇ ಕೆಲಸಕ್ಕೆ ಯಾರಾದರೂ ಸಿಗುವುದಿದ್ದರೆ ಒಬ್ಬ ಕೆಲಸಗಾರನನ್ನು ಕರೆತರಬೇಕು. ಫೈಝಲ್‌ರ ಗುಣ ಆ ನಾಡನ್ನೆ ತಾನು ಪ್ರೀತಿಸುವಂತೆ ಮಾಡಿದೆ ಎಂದು ಅಬ್ದುಲ್ಲ ಅಲ್‌ಮುಹಾವೀಸ್ ಹೇಳಿದ್ದಾರೆ.

ಕೃಪೆ : www.madhyamam.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News