×
Ad

ತಾಲೂಕು ವಿಶ್ವ ದಿವ್ಯಾಂಗ ಚೇತನರ ದಿನಾಚರಣೆ

Update: 2016-12-05 15:09 IST

ಪುತ್ತೂರು, ಡಿ.5: ಕರ್ನಾಟಕ ಸರಕಾರ, ಸರ್ವ ಶಿಕ್ಷಣ ಅಭಿಯಾನ, ದ.ಕ.ಜಿ.ಪಂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ,  ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ರೋಟರಿ ಕ್ಲಬ್ ಪುತ್ತೂರು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪುತ್ತೂರು ಹಾಗೂ ಲಿಟ್ಲ್ ಪ್ಲವರ್ ಅನುದಾನಿತ ಹಿ.ಪ್ರಾ.ಶಾಲೆ ದರ್ಬೆ ಪುತ್ತೂರು ಇದರ ಸಹಯೋಗದಲ್ಲಿ `ವಿಶ್ವ ದಿವ್ಯಾಂಗ ಚೇತನ ಮಕ್ಕಳ ದಿನಾಚರಣೆ 2016' ಕಾರ್ಯಕ್ರಮ ಶನಿವಾರ ಪುತ್ತೂರು ತಾಲೂಕಿನ ದರ್ಬೆ ಲಿಟ್ಲ್ ಪ್ಲವರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಗರ ಸಭಾ ಸದಸ್ಯೆ ರೇಖಾ ಯಶೋಧರ್ ಉದ್ಘಾಟಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿಷ್ಣುಪ್ರಸಾದ್ ಸಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲಿಟ್ಲ್ ಪ್ಲವರ್ ಸಂಸ್ಥೆ ಮ್ಯಾನೇಜರ್ ಸಿಸ್ಟರ್ ಲಾಯೋಲಿನ್, ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ಎ.ಜೆ ರೈ, ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷೆ ಅರ್ಚನಾ ಪ್ರಕಾಶ್, ಶಿಕ್ಷಣ ಸಂಯೋಜಕರಾದ ತನುಜಾ ಮತ್ತು ಲೋಕಾನಂದ, ಬಿ.ಆರ್.ಪಿ ವಿಜಯಕುಮಾರ್, ಸಿ.ಆರ್.ಪಿ ಶಾಲಿನಿ, ಸಿ.ಆರ್.ಪಿಗಳಾದ ಜಯಂತ್ ವೈ, ದೇವಪ್ಪ, ಬಶೀರ್, ಸುನಿಲ್, ನಾರಾಯಣ, ಗಣೇಶ್, ಜನಾರ್ಧನ ಉಪಸ್ಥಿತರಿದ್ದರು. 

ಶಾಲಾ ಮುಖ್ಯಗುರು ಸಿಸ್ಟರ್ ಲಿಲ್ಲಿ ಡಿ'ಸೋಜ ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಐ.ಇ.ಡಿಯ ನೋಡೆಲ್ ದೇವಕಿ ಪ್ರಸ್ತಾವಿಕ ಮಾತುಗಳನ್ನಾಡಿದರು.  ವಿಶೇಷ ಶಿಕ್ಷಕಿ ಶಶಿಕಲಾ ವರದಿ ವಾಚಿಸಿದರು. ಬಿ.ಆರ್.ಪಿ ದಿನೇಶ ಗೌಡ ಕೆ ವಂದಿಸಿದರು. 
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಆಟೋಟ ಮತ್ತು ಜಾನಪದ ಕ್ರೀಡೆಗಳು ನಡೆಸಲಾಯಿತು. 95 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

              
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News