ಇಡೀ ಭಾರತೀಯರಿಗೆ ದುಡ್ಡು ಕೊಡುವ ರಿಸರ್ವ್ ಬ್ಯಾಂಕ್ ಗವರ್ನರ್ ಗೆ ಎಷ್ಟು ಸಂಬಳ ?

Update: 2016-12-05 09:40 GMT

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಊರ್ಜಿತ್ ಪಟೇಲ್ ರೂ. 2 ಲಕ್ಷದ ಆಸುಪಾಸಿನಲ್ಲಿ ವೇತನ ಪಡೆಯುತ್ತಾರೆ. ಅಲ್ಲದೆ ಅವರ ನಿವಾಸದಲ್ಲಿ ಸಹಾಯಕ ಸಿಬ್ಬಂದಿಗಳನ್ನೂ ಒದಗಿಸಿಲ್ಲ ಎಂದು ಆರ್‌ಬಿಐ ಹೇಳಿದೆ. ಸೆಪ್ಟೆಂಬರ್‌ನಲ್ಲಿ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಪಟೇಲ್, ಈಗ ಮುಂಬೈನಲ್ಲಿರುವ ಬ್ಯಾಂಕ್‌ನ ಫ್ಲಾಟ್‌ನಲ್ಲಿ ನೆಲೆಸಿದ್ದಾರೆ. ಯಾವುದೇ ಸಹಾಯಕ ಸಿಬ್ಬಂದಿಗಳನ್ನು ಈಗಿನ ಗವರ್ನರ್ ಊರ್ಜಿತ್ ಪಟೇಲ್ ನಿವಾಸದಲ್ಲಿ ಒದಗಿಸಿಲ್ಲ. ಎರಡು ಕಾರುಗಳು ಮತ್ತು ಎರಡು ಚಾಲಕರನ್ನು ಮಾತ್ರ ಈಗಿನ ಗವರ್ನರ್‌ಗೆ ಒದಗಿಸಲಾಗಿದೆ ಎಂದು ಆರ್‌ಬಿಐ ಆರ್‌ಟಿಐ ಪ್ರಶ್ನರಗೆ ಉತ್ತರಿಸಿದೆ. ಮಾಜಿ ಆರ್‌ಬಿಐ ಗರ್ವನರ್ ರಘುರಾಂ ರಾಜನ್ ಮತ್ತು ಈಗಿನ ಗವರ್ನರ್‌ಗೆ ಕೊಡುತ್ತಿರುವ ವೇತನ- ಭತ್ಯೆಗಳ ಬಗ್ಗೆ ಬ್ಯಾಂಕ್ ಬಳಿ ವಿವರ ಕೇಳಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಊರ್ಜಿತ್ ಪಟೇಲ್ ರು. 2.09 ಲಕ್ಷ ವೇತನ ಪಡೆದಿದ್ದಾರೆ. ಅದೇ ಮೊತ್ತವನ್ನು ಆಗಸ್ಟ್‌ನಲ್ಲಿ ರಘುರಾಮ್ ರಾಜನ್ ಪಡೆದಿದ್ದರು. ಸೆಪ್ಟೆಂಬರ್ 4ರಂದು ಅಧಿಕಾರ ತ್ಯಜಿಸಿದ ರಾಜನ್ ಅವರಿಗೆ ನಾಲ್ಕು ದಿನಗಳ ವೇತನವಾಗಿ ರೂ. 27,933 ಕೊಡಲಾಗಿತ್ತು.

ರಾಜನ್ ಅವರು 2013 ಸೆಪ್ಟೆಂಬರ್ 5ರಂದು ಆರ್‌ಬಿಐ ಗವರ್ನರ್ ಆಗಿ ಅಧಿಕಾರಿ ವಹಿಸಿದ್ದರು. ಆಗ ಅವರ ಮಾಸಿಕ ವೇತನ ರೂ. 1.69 ಲಕ್ಷ ಆಗಿತ್ತು. ನಂತರ 2014 ಮತ್ತು 2015ರಲ್ಲಿ ಇದನ್ನು ಕ್ರಮವಾಗಿ ರೂ. 1.78 ಲಕ್ಷ ಮತ್ತು ರೂ. 1.87 ಲಕ್ಷಕ್ಕೆ ಏರಿಸಲಾಗಿತ್ತು. ಜನವರಿಯಲ್ಲಿ ಅವರ ವೇತನವನ್ನು ರೂ. 2.04 ಲಕ್ಷದಿಂದ ರೂ. 2.09ಗೆ ಏರಿಸಲಾಗಿತ್ತು ಎಂದು ಆರ್‌ಟಿಐ ಪ್ರಶ್ನೆಗೆ ಬ್ಯಾಂಕ್ ಉತ್ತರಿಸಿದೆ.

ರಾಜನ್ ಅವರಿಗೆ ಮೂರು ಕಾರುಗಳು ಮತ್ತು ನಾಲ್ವರು ಚಾಲಕರನ್ನು ಒದಗಿಸಲಾಗಿತ್ತು. ಒಬ್ಬ ಪರಿಚಾರಕ ಮತ್ತು ಒಂಭತ್ತು ಸಿಬ್ಬಂದಿಗಳನ್ನು ಬ್ಯಾಂಕ್‌ನಿಂದ ಮಾಜಿ ಗವರ್ನರ್ ರಘುರಾಮ ರಾಜನ್‌ರಿಗೆ ಮುಂಬೈನಲ್ಲಿ ಕೊಡಲಾಗಿದ್ದ ಬಂಗಲೆಯಲ್ಲಿ ನೇಮಿಸಲಾಗಿತ್ತು ಎಂದೂ ಆರ್‌ಬಿಐ ಹೇಳಿದೆ.

ಇತ್ತೀಚೆಗೆ ಊರ್ಜಿತ್ ಪಟೇಲ್ ನೇಮಕ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿತ್ತು. ಪಟೇಲ್ ಅವರನ್ನು ಆಗಸ್ಟ್ 20ರಂದು ಹೊಸ ಆರ್‌ಬಿಐ ಗವರ್ನರ್ ಆಗಿ ಹೆಸರಿಸಲಾಗಿತ್ತು.

ಕೃಪೆ: www.hindustantimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News