×
Ad

3-5 ಸೆಂಟ್ಸ್ ಸೈಟಿನಲ್ಲಿ ಮನೆ ನಿರ್ಮಿಸುವರಿಗೆ ನಿಯಮಾವಳಿಯಿಂದ ವಿನಾಯಿತಿ ನೀಡಲು ಸರಕಾರಕ್ಕೆ ಮನವಿ: ಸುರೇಶ್ ಬಲ್ಲಾಳ್

Update: 2016-12-05 15:29 IST

ಮಂಗಳೂರು ,ಡಿ.5: ನಗರದಲ್ಲಿ  ಮೂರು ಸೆಂಟ್ಸ್ ಹಾಗೂ  ಐದು  ಸೆಂಟ್ಸ್   ಸೈಟಿನಲ್ಲಿ ಮನೆ ನಿರ್ಮಿಸುವವರಿಗೆ  ಈಗ ನಿಯಮಾವಳಿಯಿಂದ  ವಿನಾಯಿತಿ ನೀಡಲು ಸರಕಾರಕ್ಕೆ  ಮನವಿ  ಸಲ್ಲಿಸುವುದಾಗಿ  ನೂತನ ಮುಡಾ ಅಧ್ಯಕ್ಷ  ಸುರೇಶ್  ಬಲ್ಲಾಳ್  ತಿಳಿಸಿದ್ದಾರೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಇಂದು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಸುದ್ದಿಗಾರನ್ನುದ್ದೇಶಿಸಿ ಮಾತನಾಡಿದರು.

ಪ್ರಸಕ್ತ  ಒಂದೂವರೆ ಸೆಂಟ್ಸ್ ಭೂಮಿ ಇರುವವರು  ಮನೆ ಕಟ್ಟಲು  ಸಿಂಗಲ್  ಸೈಟ್  ನಿಯಮಾವಳಿ ಪ್ರಕಾರ  ಮೂಡಾದಿಂದ   ಅನುಮತಿ   ಪಡೆಯಬೇಕಾಗಿದೆ.ಆ ನಿಯಮಾವಳಿಯ ಪ್ರಕಾರ  ಮನೆಯ  ಆವರಣದಲ್ಲಿ  ಸೂಕ್ತ ಸ್ಥಳಾವಕಾಶ ಮತ್ತು  ದಾರಿ  ನಿರ್ಮಾಣಕ್ಕೆ  ಸ್ಥಳವನ್ನು  ಮೀಸಲಿರಿಸಬೇಕೆಂಬ  ನಿಯಮಾವಳಿಯಿಂದ  ಹಲವಾರು ನಿವಾಸಿಗಳು  ಮನೆ ನಿರ್ಮಿಸಲು  ಸಾಧ್ಯವಾಗದೆ  ಸಮಸ್ಯೆಯಲ್ಲಿದ್ದಾರೆ .ಈ ಹಿನ್ನೆಲೆಯಲ್ಲಿ  ಕನಿಷ್ಟ  5 ಸೆಂಟ್ಸ್  ವರೆಗೆ  ಭೂಮಿ ಹೊಂದಿರುವವರಿಗೆ ಮನೆ ನಿರ್ಮಿಸಲು ಈ ನಿಯಮಾವಳಿಯಿಂದ ವಿನಾಯತಿ ನೀಡಲು ರಾಜ್ಯದ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿ ಪ್ರಯತ್ನಿಸಲಾಗುವುದು ಎಂದು ಸುರೇಶ್ ಬಲ್ಲಾಳ್ ತಿಳಿಸಿದ್ದಾರೆ.

 ಈ ಸಂದರ್ಭದಲ್ಲಿ  ಶಾಸಕ ಜೆ.ಆರ್.ಲೋಬೊ,ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ,ಮನಪಾ ಸದಸ್ಯರಾದ ಶಶಿಧರ ಹೆಗ್ಡೆ,ಲ್ಯಾನ್ಸಿ ಲೊಟ್ ಪಿಂಟೋ,ಪುರುಷೋತ್ತಮ ಚಿತ್ರಾಪುರ,ಅಪ್ಪಿಲತಾ,ಪ್ರತಿಭಾ ಕುಳಾಯಿ,ಪ್ರಕಾಶ್ ಆಳ್ವ,ಪ್ರೇಮ ನಾಥ್ ,ಜಿಲ್ಲಾ ಮಹಿಳಾ  ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ,ಎಐಸಿಸಿ ಸದಸ್ಯ ಪಿ.ವಿ.ಮೋಹನ್,ಮುಡ ಸದಸ್ಯರಾದ ಕೇಶವ ಸನಿಲ್,ಮುರಳಿ ಸಾಲ್ಯಾನ್,ವಸಂತ ಬೆರ್ನಾಡ್,ಶೋಭಾ ಕೇಶವ,ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುಸೈನ್ ಕಾಟಿಪಳ್ಳ,ವಿಶ್ವಾಸ್ ಕುಮಾರ್ ದಾಸ್,ರಾಜೇಶ್ ಕುಳಾಯಿ  ಮೊದಲಾದವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News