ಬೊಳ್ಳೂರು ಹಳೆಯಂಗಡಿಯಲ್ಲಿ 'ಹುಖೂಖೂಲ್ ಇಬಾದ್' ಸ್ನೇಹ ಸಮ್ಮಿಲನ

Update: 2016-12-05 12:37 GMT

ಮಂಗಳೂರು, ಡಿ 5 : ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಸುರತ್ಕಲ್ & ಉಡುಪಿ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಯ ಜಂಟಿ ಆಶ್ರಯದಲ್ಲಿ ಹುಖೂಕುಲ್ ಇಬಾದ್ ಅಭಿಯಾನದ ಅಂಗವಾಗಿ ಸ್ನೇಹ ಸಮ್ಮಿಲನವು ಡಿ. 6 ಮಂಗಳವಾರದಂದು ಪೂರ್ವಾಹ್ನ 9.30 ಗಂಟೆಗೆ ಬೊಳ್ಳೂರು ಹಳೆಯಂಗಡಿಯ ದಾರುಲ್ ಉಲೂಂ ಮದ್ರಸದಲ್ಲಿ ನಡೆಯಲಿದೆ.

ಸುರತ್ಕಲ್ ಮತ್ತು ಉಡುಪಿ ರೇಂಜ್‌ಗೊಳಪಟ್ಟ ಮಸೀದಿಗಳ ಖತೀಬರು, ಮದ್ರಸ ಅಧ್ಯಾಪಕರು ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಸಮಿತಿಯ ಪದಾಧಿಕಾರಿಗಳು ಸ್ನೇಹ ಸಮ್ಮಿಲನದಲ್ಲಿ ಭಾಗವಹಿಸಲಿದ್ದಾರೆ.

ಚೊಕ್ಕಬೆಟ್ಟು ಮಸೀದಿ ಖತೀಬ್ ಮೌಲಾನಾ ಅಬ್ದುಲ್ ಅಝೀರ್ ದಾರಿಮಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಇಕ್ಬಾಲ್ ಅಹಮದ್ ಮುಲ್ಕಿ, ಅಧ್ಯಕ್ಷರು, ಮದ್ರಸ ಮ್ಯಾನೇಜ್‌ಮೆಂಟ್ ಸುರತ್ಕಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಹುಖೂಖುಲ್ ಇಬಾದ್-ಮನುಕುಲದ ಸೇವೆ” ಎಂಬ ವಿಷಯದಲ್ಲಿ ಸಮಸ್ತ ಮುಶಾವರ ಕರ್ನಾಟಕ ಸದಸ್ಯ ಅಲ್‌ಹಾಜ್ ಇಬ್ರಾಹಿಂ ಬಾಖವಿ ಕೆ.ಸಿ ರೋಡ್ ಮತ್ತು ಟ್ಯಾಲೆಂಟ್ ಸಲಹೆಗಾರ ಹಾಜಿ ರಫೀಕ್ ಮಾಸ್ಟರ್ ತರಗತಿ ನಡೆಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸುರತ್ಕಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲ ದಾರಿಮಿ, ಉಡುಪಿ ರೇಂಜ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಫೈಝಿ, ಉಡುಪಿ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಎಂ.ಪಿ ಮೊದಿನಬ್ಬ, ಶಾಫಿ ಜುಮಾ ಮಸೀದಿ ಮುಲ್ಕಿ ಖತೀಬ್ ಇಬ್ರಾಹಿಂ ದಾರಿಮಿ, ಬೊಳ್ಳೂರು ಜುಮಾ ಮಸೀದಿ ಖತೀಬ್ ಅಝರ್ ಫೈಝಿ ಮೊದಲಾದವರು ಭಾಗವಹಿಸಲಿದ್ದಾರೆ.

ಸದರಿ ಕಾರ್ಯಕ್ರಮದಲ್ಲಿ ಸುರತ್ಕಲ್ ಮತ್ತು ಉಡುಪಿ ರೇಂಜ್‌ಗೊಳಪಟ್ಟ ಎಲ್ಲಾ ಮಸೀದಿಗಳ ಖತೀಬರು, ಮದ್ರಸ ಅಧ್ಯಾಪಕರು ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಸಮಿತಿಯವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸುರತ್ಕಲ್ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಇಕ್ಬಾಲ್ ಅಹಮದ್ ಮುಲ್ಕಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News