ನಂತೂರು: ರಕ್ತದಾನ ಶಿಬಿರ
Update: 2016-12-05 18:42 IST
ಮಂಗಳೂರು, ಡಿ.5: ಚೂಂತಾರು ಸರೋಜಿನಿ ಭಟ್ ಪ್ರತಿಪ್ಠಾನ (ರಿ) ಮಂಗಳೂರು, ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಮತ್ತು ಲಯನೆಸ್ ಕ್ಲಬ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಂತೂರಿನ ಭಾರತಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು.
ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಉಮೇಶ್ ಪ್ರಭು, ಕಾರ್ಯದರ್ಶಿ ಸತೀಶ್ ಪೈ, ಲಯನೆಸ್ ಕ್ಲಬ್ ಮಂಗಳೂರು ಅಧ್ಯಕ್ಷೆ ಪ್ರತಿಭಾ ಪ್ರಭು, ಕಾರ್ಯದರ್ಶಿ ಅನಿತಾ ಶೆಣೈ, ರಕ್ತನಿಧಿಯ ಅಂಥೊನಿ, ಸರೋಜಿನಿ ಪ್ರತಿಷ್ಠಾನದ ಗಣೇಶ್ ಸುಂದರ್ ಉಪಸ್ಥಿತರಿದ್ದರು.
ಭಾರತಿ ಕಾಲೇಜಿನ ಕಾರ್ಯದರ್ಶಿ ಕೃಷ್ಣ ನೀರಮೂಲೆ ಸ್ವಾಗತಿಸಿದರು. ಪ್ರತಿಷ್ಠಾನದ ಡಾ. ಮುರಳಿ ಮೋಹನ್ ಚೂಂತಾರು ವಂದಿಸಿದರು.