×
Ad

ಪ್ರಭಾವಕ್ಕೆ ಒಳಗಾಗದೆ ಅರ್ಹರಿಗೆ ಪ್ರಶಸ್ತಿ ಸಿಗಲಿ: ಸಚಿವ ಪ್ರಮೋದ್

Update: 2016-12-05 18:51 IST

ಉಡುಪಿ, ಡಿ.5: ಸಾಹಿತ್ಯ ಲೋಕಕ್ಕೆ ಸಾಕಷ್ಟು ಲೇಖಕರು ಕೊಡುಗೆಯನ್ನು ನೀಡಿದ್ದಾರೆ. ಅವರಲ್ಲಿ ಹೆಚ್ಚಿನವರಿಗೆ ಪ್ರಚಾರ ಸಿಗುತ್ತಿಲ್ಲ. ಅಂತಹವರನ್ನು ಗುರುತಿಸುವ ಕಾರ್ಯ ಆಗಬೇಕು. ಹೀಗಾಗಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ಅರ್ಹರಿಗೆ ಪ್ರಶಸ್ತಿ ನೀಡುವುದು ಮುಖ್ಯ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಕೋಟೇಶ್ವರ ಎನ್‌ಆರ್‌ಎಂಎಚ್ ಪ್ರಕಾಶನದ ವತಿಯಿಂದ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜು ಸಭಾಂಗಣದಲ್ಲಿ ವಸುಮತಿ ಉಡುಪ ಅವರ ‘ಮನ್ವಂತರ’ ಕೃತಿಗೆ ದಿ. ಪಾಂಡೇಶ್ವರ ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಮಣಿಪಾಲ ಅಡಾಕೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಶಾಂತರಾಮ್ ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ಭಾಸ್ಕರ ಆಚಾರ್ಯರ ‘ಆರ್ಚಿ ಅಂಕಣಗಳು’ ಮತ್ತು ‘ಅನ್ನಬ್ರಹ್ಮನ ದೇಗುಲ ದಲ್ಲಿ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

 ಕಾಲೇಜಿನ ಯೋಗಕ್ಷೇಮ ಪಾಲನಾಧಿಕಾರಿ ರೋಹಿತ್ ಎಸ್.ಅಮೀನ್, ವಿಮರ್ಶಕ ಬೆಳಗೋಡು ರಮೇಶ್ ಭಟ್, ಪ್ರಶಸ್ತಿ ಸಮಿತಿ ಸಂಚಾಲಕಿ ಶಾರದಾ ಭಟ್ ಉಪಸ್ಥಿತರಿದ್ದರು.

ಪ್ರೊ.ಉಪೇಂದ್ರ ಸೋಮಯಾಜಿ ಸ್ವಾಗತಿಸಿದರು. ಸಮಿತಿಯ ಕಾರ್ಯಾ ಧ್ಯಕ್ಷ ಡಾ.ಭಾಸ್ಕರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಸಬಿತಾ ಆಚಾರ್ಯ ವಂದಿಸಿದರು. ಶ್ರುತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News