ಮೂಡುಬಿದಿರೆ : ವಿಕಲಚೇತನರ ಉಚಿತ ತಪಾಸಣೆ ಹಾಗೂ ಗುರುತಿಸುವಿಕೆಯ ಶಿಬಿರ

Update: 2016-12-05 14:20 GMT

 ಮೂಡುಬಿದಿರೆ, ಡಿ.5  :   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ವೈದ್ಯಕೀಯ ಮಹಾವಿದ್ಯಾಲಯಗಳು, ಡಿಡಿಆರ್‌ಸಿ, ಡಿಇಐಸಿ, ರೆಡ್‌ಕ್ರಾಸ್, ಐಎಂಎ-ದ.ಕ, ಚೇತನಾ ಸಂಸ್ಥೆ, ಲಯನ್ಸ್ ಹಾಗೂ ಸ್ಥಳೀಯ ಸರಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಕಲಚೇತನರ ಉಚಿತ ತಪಾಸಣೆ ಹಾಗೂ ಗುರುತಿಸುವಿಕೆಯ ಶಿಬಿರವು ರವಿವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. 

ಶಾಸಕ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಶಿಬಿರವನ್ನು ಉದ್ಘಾಟಿಸಿ, ಗುರುತಿನ ಚೀಟಿಯನ್ನು ವಿತರಿಸಿ ಮಾತನಾಡಿ,  ವೈದ್ಯರು ವಿಕಲಚೇತನರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಅರ್ಹ ವಿಕಲಚೇತನರಿಗೆ ಸರಕಾರದಿಂದ ಸಿಗುವಂತಹ ಸಲಕರಣೆಗಳನ್ನುಸೂಕ್ತ ಸಮಯದಲ್ಲಿ ಒದಗಿಸುವಂತಹ ಕೆಲಸವನ್ನು ಇಲಾಖೆಯ ಮೂಲಕ ಮಾಡಲಾಗುತ್ತಿದೆ. ಅಲ್ಲದೆ ಸರಕಾರಿ ಆಸ್ಪತ್ರೆಗಳು ಕೂಡಾ ಹೆಚ್ಚಿನ ಆಸಕ್ತಿಯನ್ನು ವಹಿಸಿ ವಿಕಲಚೇತನರನ್ನು ಗುರುತಿಸಿ ಅವರಿಗೆ ಸವಲತ್ತುಗಳು ಸಿಗುವಂತಹ ಕೆಲಸಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

   ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಆಲಂಗಾರು ಚರ್ಚಿನ ಧರ್ಮಗುರು ಬೇಸಿಲ್ ವಾಸ್, ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್, ಅಂಗವಿಕಲ ಜಿಲ್ಲಾ ಕಲ್ಯಾಣಾಧಿಕಾರಿ ಪಿ.ಶೋಭಾ, ಹಿರಿಯ ಮಕ್ಕಳ ತಜ್ಞ ಡಾ.ಯು.ವಿ.ಶೆಣೈ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಸಿ.ಹೆಚ್.ಗಫೂರ್, ಆಲಂಗಾರು ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಅರ್ಮಾನ್ ಅತಿಥಿಗಳಾಗಿ ಭಾಗವಹಿಸಿದ್ದರು.

 ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಶಶಿಕಲಾ ಸ್ವಾಗತಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಕಾರ್ಯಕ್ರಮ ನಿರೂಪಿಸಿದರು. ಅರವಳಿಕೆ ತಜ್ಞ ಡಾ.ಜ್ಞಾನೇಶ್ ವಂದಿಸಿದರು.

ಈ ಶಿಬಿರದಲ್ಲಿ 46 ಮಂದಿ ವಿಕಲಚೇತನರನ್ನು ಗುರುತಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News