ಮಾನಸಿಕ ಭಿನ್ನ ಸಾಮರ್ಥ್ಯ- ಶ್ರವಣದೋಷ ಮಕ್ಕಳ ಕ್ರೀಡಾಕೂಟ

Update: 2016-12-05 14:44 GMT

ಉಡುಪಿ, ಡಿ.5: ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಉದ್ಯಾವರ ಘಟಕದ ವತಿಯಿಂದ ಮಾನಸಿಕ ಭಿನ್ನ ಸಾಮರ್ಥ್ಯದ ಹಾಗೂ ಶ್ರವಣದೋಷ ಹೊಂದಿದ ಮಕ್ಕಳ ಕ್ರೀಡಾಕೂಟವನ್ನು ಸೋಮವಾರ ಉದ್ಯಾವರ ಗ್ರಾಪಂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಮಾತನಾಡಿ, ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಮನೋಸ್ಥೈರ್ಯ ತುಂಬುವ ಕಾರ್ಯ ಆಗಬೇಕು. ಅದನ್ನು ಕ್ರೀಡಾಕೂಟಗಳಿಂದ ಮಾಡಲು ಸಾಧ್ಯ. ಇವರಿಗೆ ಸಾಮಾನ್ಯರಿಗಿಂತ ವಿಶೇಷವಾದ ಶಕ್ತಿ ಇದೆ. ಅವರಿಗೆ ಪ್ರೋತ್ಸಾಹ ನೀಡಲು ನಾವೆಲ್ಲ ಮುಂದಾಗಬೇಕು ಎಂದರು.

ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಪಥ ಸಂಚಲನದ ವಂದನೆ ಸ್ವೀಕರಿಸಿದರು.

ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಧ್ವಜಾರೋಹಣ ನೆರವೇರಿಸಿದರು.

ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು.

ವಿಕಲಚೇತನ ಸಬಲೀಕರಣ ಅಧಿಕಾರಿ ನಿರಂಜನ್ ಭಟ್, ತಾಪಂ ಸದಸ್ಯೆ ರಜನಿ ಅಂಚನ್, ಮಾಜಿ ಜಿಪಂ ಸದಸ್ಯೆ ನಯನಾ ಗಣೇಶ್, ಸಂಘಟನೆಯ ಮಾಜಿ ಅಧ್ಯಕ್ಷರಾದ ಸದಾನಂದ ಬಳ್ಕೂರು, ಜಯ ಸಿ.ಕೋಟ್ಯಾನ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಕೃಷ್ಣ ಮೊಗವೀರ ಬೈಂದೂರು, ಉದ್ಯಾವರ ಘಟಕದ ಕ್ರೀಡಾ ಕಾರ್ಯದರ್ಶಿ ಸಚಿನ್ ಸುವರ್ಣ ಪಿತ್ರೋಡಿ, ಗ್ರಾಪಂ ಮಾಜಿ ಅಧ್ಯಕ್ಷ ವಿಜಯ ಕುಮಾರ್, ರಾಘವೇಂದ್ರ ಬೈಕಾಡಿ, ಶಿವರಾಮ ಪೂಜಾರಿ ಉಪಸ್ಥಿತರಿದ್ದರು.

ಉದ್ಯಾವರ ಘಟಕದ ಅಧ್ಯಕ್ಷ ಧನ್‌ರಾಜ್ ಎಸ್.ತಿಂಗಳಾಯ ಸ್ವಾಗತಿಸಿ ದರು.

ಚಂದ್ರಶೇಖರ್ ಬೊಳ್ಜೆ ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಈ ಕ್ರೀಡಾಕೂಟದಲ್ಲಿ ಜಿಲ್ಲೆಯ 9 ವಿಶೇಷ ಮಕ್ಕಳ ಶಾಲೆಯ 230 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News