ಬಳ್ಳಮಂಜದಲ್ಲಿ ಷಷ್ಠೀ ನಹೋತ್ಸವ

Update: 2016-12-05 18:01 GMT

\ಬೆಳ್ತಂಗಡಿ, ಡಿ.5 :  ನಾಗಸಾನಿಧ್ಯವಿರುವ ತಾಲೂಕಿನ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ದೇವಳದಲ್ಲಿ ವೈಭವದ ಷಷ್ಠೀ ಮಹೋತ್ಸವದ ಪ್ರಯುಕ್ತ ಶ್ರೀ ದೇವರ ಬ್ರಹ್ಮರಥೋತ್ಸವ ಸೋಮವಾರ ನೆರವೇರಿತು.

ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಷಷ್ಠೀ ಹಿಂದಿನ ದಿನ ಶ್ರೀ ದೇವರಿಗೆ ಪಂಚಮಿ ಅಂಗವಾಗಿ ಪಲ್ಲಕ್ಕಿ ಉತ್ಸವ, ಅಂಗಣ ಬಂಡಿ ಉತ್ಸವ ನಡೆಯಿತು.

ನಾರಾವಿ ಸನಿಹದ ಕೊಕ್ರಾಡಿ ಶ್ರೀ ಸುಬ್ರಹಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಸೋಮವಾರ ವಿಶೇಷ ಪೂಜೆ ನೆರವೇರಿತು. ಉಪ್ಪಿನಂಗಡಿ ಸನಿಹದ ಇಳಂತಿಲ ಗ್ರಾಮದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಬಲಿವಾಡು ಕೂಟ ನಡೆಯಿತು.

ಈ ಸಂದರ್ಭ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ನಾಗತಂಬಿಲ, ಪವಮಾನಭಿಷೇಕ ಸೇವೆಗಳು ನಡೆದವು. ಧರ್ಮಸ್ಥಳದ ಸನಿಹದ ಪೊದಂಬಿಲ ನಾರ್ಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ವಿಶೇಷ ಪೂಜೆ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News