‘ವಿಶ್ವ ಏಡ್ಸ್ ದಿನ’ ಜನಜಾಗೃತಿಗೆ ಸೈಕಲ್ ಜಾಥಾ
Update: 2016-12-05 23:37 IST
ಉಡುಪಿ, ಡಿ.5: ವಿಶ್ವ ಏಡ್ಸ್ ದಿನದ ಪ್ರಯುಕ ಬಿದ್ಕಲ್‌ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿಭಾಗವಾದ ಭಗತ ಸಿಂಗ್ ರೋವರ್ ತಂಡದ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಟು ಕೋಟೇಶ್ವರ ಮೂಲಕ ಕುಂದಾಪುರ, ಬಸ್ರೂರು, ಹುಣಸೆಮಕ್ಕಿ ಮೂಲಕ ವಾಪಾಸ್ ಬಿದ್ಕಲ್‌ಕಟ್ಟೆ ಕಾಲೇಜಿನವರೆ ಸುಮಾರು 50 ಕಿ.ಮೀ. ಸೈಕಲ್ ಜಾಥಾ ನಡೆಸಿದರು.
ಜಾಥಾದಲ್ಲಿ ಜನಜಾಗೃತಿ ಭಿತ್ತಿಫಲಕಗಳ ಮೂಲಕ ಜನರಲ್ಲಿ ಏಡ್ಸ್ ರೋಗ ವನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ರಾಮ ಎಚ್ ನಾಯ್ಕಾ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಉಪನ್ಯಾಸಕ ರವಿಚಂದ್ರ ಇವರ ನೇತೃತ್ವದಲ್ಲಿ ಸೈಕಲ್ ಜಾಥಾ ಕಾರ್ಯ್ರಮವನ್ನು ಹಮ್ಮಿಕೊಳ್ಳಲಾಯಿತು.