ಕುಡಿಯುವ ನೀರಿಗಾಗಿ ಎಸ್‌ಡಿಪಿಐ

Update: 2016-12-05 18:16 GMT

ಮುಲ್ಕಿ, ಡಿ.5: ಕುಡಿಯುವ ನೀರಿ , ಹಕ್ಕು ಪತ್ರ ಸೇರಿದಂತೆ ಸರಕಾರಿ ಸವಲತ್ತುಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಮುಲ್ಕಿ ಮೂಡಬಿದಿರೆ ಕ್ಷೇತ್ರ ಎಸ್‌ಡಿಪಿಐ ವತಿಯಿಂದ ಸೋಮವಾರ ಮುಲ್ಕಿ ನಗರ ಪಂಚಾಯತ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಧರಣಿೆ ನಡೆಸಿದರು.

 ಈ ಸಂದರ್ಭ ಮಾತನಾಡಿದ ಮುಲ್ಕಿ ಮೂಡಬಿದಿರೆ ಕ್ಷೇತ್ರ ಅಧ್ಯಕ್ಷ ಎ.ಕೆ. ಅಶ್ರಫ್, ಮುಲ್ಕಿ ಸೇರಿದಂತೆ ಈ ಭಾಗದ ಹಲವು ಪ್ರದೇಶಗಳ ಜನತೆ ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿದ್ದರೂ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ವಕ್ರಮ ಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷತೆ ವಹಿಸಿದ್ದಾರೆ ಎಂದು ದೂರಿದರು.

     ಪ್ರತೀ ವರ್ಷ ನೀರಿನ ಸಮಸ್ಯೆ ಎದುರಾಗುತ್ತಿವೆ.  ಆದರೆ, ಈ ಬಾರಿ ನವೆಂಬರ್‌ನಲ್ಲಿಯೇ ಅತೀವ ಸಮಸ್ಯೆ ಕಾಣಿಸಿಕೊಂಡಿದೆ. ನಗರ ಪಂಚಾಯತ್ ವಾರಕ್ಕೆ ಕೇವಲ 2 ಗಂಟೆಗಳ ಕಾಲ ಸಣ್ಣ ನಳಿಯ ಮೂಲಕ ನೀರು ನೀಡುತ್ತಿದೆ. ಅದು ಯಾವುದಕ್ಕೂ ಸಾಕಾಗುತ್ತಿಲ್ಲ. ಜನತೆ ನೀರಿಗಾಗಿ ಚಡಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧ ಪಟ್ಟವರು ಸದ್ಯ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಜೊತೆಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.

    ಬಡವರಾದ ಗ್ರಾಮಸ್ಥರು ನೀರಿನ ಬಲ್‌ಗಳನ್ನು ಪಾವತಿಸಲು ಶಸಕ್ತರಲ್ಲದ ಕಾರಣ ಬಿಲ್‌ಗಳು ಬಾಕಿಯಾಗುವಂತಾಗಿದೆ. ಆದ್ದರಿಂದ ಈ ವರೆಗಿನ ನೀರಿನ ಬಿಲ್‌ಗಳನ್ನು ಮನ್ನಾಮಾಡಬೇಕೆಂದು ವಿನಂತಿಸಿದ ಧರಣಿ ನಿರತರು, ಮುಂದಿನ ತಿಂಗಳಿಂದ ಸರಿಯಾಗಿ ನೀರು ನೀಡುವ ಜೊತೆಗೆ ಶುಲ್ಕ ಸಂಗ್ರಹಕ್ಕೂ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.

    ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಸರ್ವೇ ನಂಬರ್ 59ರಲ್ಲಿ ಸುಮಾರು 70 ಕುಟುಂಬಗಳು ಕಳೆದ 25 ವರ್ಷಗಳಿಂದಲೂ ವಾಸವಾಗಿವೆ. ಆದರೆ, ಅವರಿಗೆ ಈ ವರೆಗೂ ಆ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸ ಕಾರಣ ಸರಕಾರದ ವಿವಿಧ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ. ಎಲ್ಲಾ ಕುಟುಂಬಗಳಿಗೆ ಶೀಘ್ರ ಹಕ್ಕು ಪತ್ರಗಳನ್ನು ವಿತರಿಸಬೇಕೆಂದು ಧರಣಿ ನಿರತರು ಆಗ್ರಹಿಸಿದರು.

 ಮುಲ್ಕಿ ನಗರ ಪಂಚಾಯತ್‌ನ ಮುಖ್ಯಾಧಿಕಾರಿ ಶ್ರೀಮತಿ ಹಿಂದೂ ಸ್ಥಳಕ್ಕೆ ಆಗಮಿಸಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು.

ಬಳಿಕ ಮತನಾಡಿದ ಅವರು, ಮನವಿಯನ್ನು ಸಂಬಂಧಪಟ್ಟವರಿಗೆ ರವಾನಿಸಿ ಮುಖ್ಯಾಧಿಕಾರಿಯ ನೆಲೆಯಲ್ಲಿ ನೀಡಬಹುದಾದ ಎಲ್ಲಾ ಸಹಕಾರ ನಿಡುವುದಾಗಿ ಭರವಸೆ ನೀಡಿದರು.

  ಧರಣಿಯಲ್ಲಿ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಮುಲ್ಕಿ ವಲಯಾಧ್ಯಕ್ಷ ಶರೀಫ್ ಕೊಲ್ನಾಡ್, ಅಬೂಬಕರ್ ಕಾರ್ನಾಡ್, ಮುಬೀನ್ ಕೊಲ್ನಾಡ್, ಶಮೀಮ್ ಕೊಲ್ನಾಡ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News