ತುಳು ಅಕಾಡಮಿಯ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2016-12-05 18:21 GMT

ಮಂಗಳೂರು, ಡಿ.5: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 2016ನೆ ಸಾಲಿನ ಗೌರವ ಪ್ರಶಸ್ತಿಗೆ ತುಳು ಸಾಹಿತ್ಯ-ಸಂಶೋಧನೆ, ತುಳು ಸಿನೆಮಾ ಕ್ಷೇತ್ರ, ತುಳುನಾಟಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರನ್ನು ಪರಿಗಣಿಸಿ ಪ್ರತಿಯೊಂದು ಕ್ಷೇತ್ರಕ್ಕೆ ಒಬ್ಬರಂತೆ ಮೂವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಸ್ವತ: ಅಭ್ಯರ್ಥಿಗಳು ಅಥವಾ ಸಾಧಕರ ಅಭಿಮಾನಿಗಳು ಶಿಫಾರಸು ಮಾಡಿಬಹುದು. ಭರ್ತಿಮಾಡಿದ ಅರ್ಜಿಯನ್ನು ಭಾವಚಿತ್ರ ಹಾಗೂ ದಾಖಲೆಗಳ ಪ್ರತಿಗಳೊಂದಿಗೆ ಅಕಾಡಮಿಗೆ ಸಲ್ಲಿಸಬಹುದಾಗಿದೆ.

ಅಕಾಡಮಿಯ 2016ರ ಪುಸ್ತಕ ಬಹುಮಾನ ಯೋಜನೆಗೆ ಲೇಖಕರು ಅಥವಾ ಪ್ರಕಾಶಕರು ಕೂಡಾ ಅರ್ಜಿ ಸಲ್ಲಿಸಬಹುದು. ತುಳು ಕವನ, ಕಥೆ, ಕಾದಂಬರಿ, ಕಾವ್ಯ, ನಾಟಕ, ತುಳುವಿನ ಬಗ್ಗೆ ಅಧ್ಯಯನ ಗ್ರಂಥ ಹಾಗೂ ತುಳುವಿನಿಂದ ಇತರ ಭಾಷೆಗೆ -ಇತರ ಭಾಷೆಯಿಂದ ತುಳುವಿಗೆ ಭಾಷಾಂತರಿತ ಕೃತಿಗಳನ್ನು ಬಹುಮಾನಕ್ಕೆ ಆಹ್ವಾನಿಸಲಾಗಿದೆ. ಪುಸ್ತಕಗಳ ತಲಾ 4 ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ತುಳು ಅಕಾಡಮಿಯ ಗೌರವ ಪ್ರಶಸ್ತಿ -2016 ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ತುಳು ಅಕಾಡಮಿ ಪುಸ್ತಕ ಬಹುಮಾನ ಯೋಜನೆ -2016 ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ತುಳುಭವನ, ಅಂಚೆ: ಅಶೋಕನಗರ, ಉರ್ವಸ್ಟೋರ್, ಮಂಗಳೂರು - 575 006 ಈ ವಿಳಾಸಕ್ಕೆ 2017ರ ಜ.5ರೊಳಗೆ ಸಲ್ಲಿಸುವಂತೆ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News