ಸಚಿವ ಖಾದರ್ ಪ್ರವಾಸ
Update: 2016-12-05 23:55 IST
ಮಂಗಳೂರು, ಡಿ.5: ಸಚಿವ ಯು.ಟಿ.ಖಾದರ್ ಡಿ.6ರಂದು ದ.ಕ. ಜಿಲ್ಲಾ ಪ್ರವಾಸದಲ್ಲಿರುವರು.
ಬೆಳಗ್ಗೆ 9ಕ್ಕೆ ಕೋಟೆಕಾರು-ಜಲಾಲ್‌ಬಾಗ್ ರಸ್ತೆ ಉದ್ಘಾ ಟನೆ, ಬೆಳಗ್ಗೆ 9:30ಕ್ಕೆ ಮುಡಿಪು ಪಪೂ ಕಾಲೇಜಿನ ವಾರ್ಷಿ ಕೋತ್ಸವ, ಬೆಳಗ್ಗೆ 10:30ಕ್ಕೆ ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ಶಿಲಾನ್ಯಾಸ ಕಾರ್ಯಕ್ರಮ, ಮಧ್ಯಾಹ್ನ 1ಕ್ಕೆ ಪಟ್ಟೋರಿ-ಲಾಡ ಎಂಬಲ್ಲಿ ಸಾರ್ವಜನಿಕ ಮಳೆ ನೀರು ಹರಿಯುವ ತೋಡಿಗೆ ಶಂಕುಸ್ಥಾಪನೆ, ಮಧ್ಯಾಹ್ನ 1:30ಕ್ಕೆ ಪಟ್ಟೋರಿ ಮಸೀದಿ ರಸ್ತೆ ಉದ್ಘಾಟನೆ, ಅಪರಾಹ್ನ 2ಕ್ಕೆ ಮೋಂಟುಗೋಳಿ ರಸ್ತೆಗೆ ಶಿಲಾನ್ಯಾಸ. 2:30ಕ್ಕೆ ಬಾಳೆಪುಣಿ ಗ್ರಾಪಂ ವ್ಯಾಪ್ತಿಯ ಮಾರಿಯ ಮೂಳೂರು ರಸ್ತೆ ಶಿಲಾನ್ಯಾಸ, 3ಕ್ಕೆ ಮುದುಂಗಾರುಕಟ್ಟೆ ಅರಂತಾಡಿ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ. 3:30ಕ್ಕೆ ಬಾಳೆಪುಣಿ ಕಡು ವಾಯಿ ರಸ್ತೆ ಶಿಲಾನ್ಯಾಸ, ಸಂಜೆ 4ಕ್ಕೆ ಹೂಹಾಕುವಕಲ್ಲು ಅಂಬೇಡ್ಕರ್ ಭವನದಲ್ಲಿ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.